ಡಾ.ಎಂ.ಸಿ.ಸುಧಾಕರ್​ಗೆ ಸಚಿವ ಸ್ಥಾನ ಸಿಗಲಿ ministerial post 
ರಾಜ್ಯ

ಡಾ.ಎಂ.ಸಿ.ಸುಧಾಕರ್​ಗೆ ಸಚಿವ ಸ್ಥಾನ ಸಿಗಲಿ ministerial post

ಚಿಂತಾಮಣಿ: ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯಲಿ, ಡಾ.ಎಂ.ಸಿ.ಸುಧಾಕರ್​ ಮತ್ತೊಮ್ಮೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಚಿವ ಸಂಪುಟ ಸೇರಲಿ ಎಂದು ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಮಂಗಳವಾರ ಚಿಂತಾಮಣಿ ಹೊರವಲಯದ ಕನ್ನಂಪಲ್ಲಿಯಲ್ಲಿನ ಪಂಚಮುಖಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ministerial post
ಚಿಮುಲ್​ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣ ಬಾಬು ಮಾತನಾಡಿ, ಸುಧಾಕರ್​ ಸಚಿವರಾಗಿ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತಂದಿದ್ದಾರೆ. ಶಿಕ್ಷಣ ಇಲಾಖೆ ನಿಭಾಯಿಸಲು ಒಬ್ಬ ಸಮರ್ಥ ವ್ಯಕ್ತಿ ಬೇಕು. ಸ್ವತ@ ವೈದ್ಯರಾಗಿರುವ ಸುಧಾಕರ್​ಗೆ ಇಲಾಖೆಯನ್ನು ಹೇಗೆ ಮುನ್ನಡೆಸಬೇಕೆಂಬ ಚಾಕಚಕ್ಯತೆ ಗೊತ್ತಿದೆ. ಅವರು ತಂದಿರುವ ಕೌಶಲ್ಯಭರಿತ ಶಿಕ್ಷಣ ವ್ಯವಸ್ಥೆ ಹಾಗೂ ಕ್ಯಾಂಪಸ್​ ಟು ಕೆರಿಯರ್​ ಉದ್ಯೋಗಾವಕಾಶ ಯೋಜನೆಗಳು ವಿದ್ಯಾರ್ಥಿಗಳಿಗೆ ವರದಾನವಾಗಿವೆ. ಅವರು ಆರಂಭಿಸಿರುವ ಈ ದೂರದೃಷ್ಟಿ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳ್ಳಲು ಅವರಿಗೆ ಮತ್ತೆ ಅದೇ ಇಲಾಖೆ ಸಚಿವ ಸ್ಥಾನ ಸಿಗಬೇಕು ಎಂದು ಒತ್ತಾಯಿಸಿದರು.