ಚಿಕ್ಕನಾಯಕನಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿ ಎಲ್ಲರಿಗೂ ಹಕ್ಕುಗಳನ್ನು ನೀಡಿದ್ದರೂ ಇದುವರೆಗೆ ದಲಿತರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಅದ್ದರಿಂದ ನಮಗೆ ಅಧಿಕಾರ ಸಿಗಬೇಕಾದರೆ ನಾವು ಶಿಕ್ಷಿತರಾಗಿ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಜೈ ಭೀಮ್ ಕ್ರಾಂತಿ ಸೇನೆಯ ಅಧ್ಯಕ್ಷ ಎಸ್.ಜಗದೀಶ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೈ ಭೀಮ್ ಕ್ರಾಂತಿಸೇನೆ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದ ಆಶಯಗಳು ಇನ್ನು ಈಡೇರಿಲ್ಲ. ಅದ್ದರಿಂದ ನಾವು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ನಾವು ಸಹ ಶಿಕ್ಷಿತರಾಗಿ ಸಂಘಟನೆಯಾಗುವ ಮೂಲಕ ಹೋರಾಟ ಮಾಡಬೇಕು ಎಂದರು.
ತಾಲೂಕು ಅಧ್ಯಕ್ಷರಾಗಿ ಕೆ.ವಿ.ನಾಗರಾಜು, ಗೌರವಾದ್ಯಕ್ಷರಾಗಿ ಸಾಲ್ಕಟ್ಟೆ ಲೊಕೇಶ್, ಉಪಾಧ್ಯಕ್ಷರಾಗಿ ಮೋಹನ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜು ಕೆಂಕೆರೆ, ಕಾರ್ಯದರ್ಶಿಯಾಗಿ ಹೇಮಂತ್, ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್, ಸದಸ್ಯರಾದ ಗಂಗಾಧರ್, ಯಶ್ವಂತ್, ದಿನೇಶ್, ಗೌರಮ್ಮ, ಕೆಂಪಮ್ಮ ಅಧಿಕಾರ ಸ್ವೀಕರಿಸಿದರು.