ವಿಜಯಪುರ ಸಾವಯವ ಕೃಷಿ ಆಧಾರಿತ ತರಕಾರಿ ಮಾರುಕಟ್ಟೆಯಲ್ಲಿ ರೈತರನ್ನು ಬಿಜೆಪಿಯಿಂದ ಸನ್ಮಾನಿಸಲಾಯಿತು. ತಾಲೂಕು ಮಂಡಲ ಅಧ್ಯಕ್ಷ ಎಲ್​.ಎನ್​ ಅಂಬರೀಶ್​ಗೌಡ, ತಾಲೂಕು ಕಾರ್ಯದರ್ಶಿ (ಧರ್ಮಪುರ) ಅನಿಲ್​, ಟೌನ್​ ಬಿಜೆಪಿ ಅಧ್ಯಕ್ಷ ವೆಂಕಟೇಶ ಪ್ರಭು, ಕಾರ್ಯದರ್ಶಿ ಶಾಮಣ್ಣ, ತಾಲೂಕು ಮಾಜಿ ಕಾರ್ಯದರ್ಶಿ ರವಿಕುಮಾರ್​, ಬೆಂ. ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಉಪಾಧ್ಯಕ್ಷರಾದ ರಾಮಕೃಷ್ಣ ಹೆಗಡೆ, ರಾಮು, ಭಗವಾನ್​ ಇದ್ದರು. 
ರಾಜ್ಯ

ರಾಸಾಯನಿಕಮುಕ್ತ ಬೇಸಾಯ ನಮ್ಮದಾಗಲಿ / VIJAYAPUR

ವಿಜಯಪುರ : ಅಧಿಕ ಇಳುವರಿ ಪಡೆಯಬೇಕೆಂಬ ಆಸೆಯಿಂದ ಹೆಚ್ಚಾಗಿ ರಾಸಾಯನಿಕಗಳನ್ನು ಭೂಮಿಗೆ ಹಾಕಿ ಭೂತಾಯಿ ಒಡಲನ್ನು ಬಂಜರು ಮಾಡುತ್ತಿದ್ದೇವೆ. ಅಲ್ಲದೇ ಆ ವಿಷಪೂರಿತ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯಕ್ಕೂ ಹಾನಿ ಮಾಡಿಕೊಳ್ಳುತ್ತಿದ್ದೇವೆ. ಇದನ್ನು ನಿಲ್ಲಿಸಿ, ನಾವೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ದೇವನಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ನೀಲೇರಿ ಎಲ್​.ಎನ್​.ಅಂಬರೀಶ್​ ಗೌಡ ತಿಳಿಸಿದರು.
ಇಲ್ಲಿನ ಬಸವೇಶ್ವರ ನಗರದ ಶ್ರೀ ವಿನಾಯಕ ದೇಗುಲ ಆವರಣದಲ್ಲಿನ ಸಾವಯವ ಮಾರುಕಟ್ಟೆಯಲ್ಲಿ ಸಾವಯವ ತರಕಾರಿಗಳನ್ನು ಮಾರಾಟ ಮಾಡುವ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸ್ವದೇಶಿ ಗೊಬ್ಬರ ಬಳಸಿ : ರಾಸಾಯನಿಕಮುಕ್ತ ಬೇಸಾಯದ ಮಹತ್ವವನ್ನು ವಿವರಿಸಿದ ಅಂಬರೀಶ್​ ಗೌಡ, ರೈತರು ತೋಟ&ಕಚೇರಿಗಳಲ್ಲಿಯೇ ದೊರೆಯುವ ಕೊಟ್ಟಿಗೆ ಗೊಬ್ಬರ ಮತ್ತಿತರ ನೈಸರ್ಗಿಕ ಸಾವಯವ ಗೊಬ್ಬರಗಳನ್ನು ಬಳಸಿ ಬೇಸಾಯ ಮಾಡಬೇಕು. ಇದರಿಂದ ಆರಂಭದಲ್ಲಿ ಫಸಲು ಸ್ವಲ್ಪ ಕಡಿಮೆ ಬಂದರೂ, ಉತ್ತಮ ಗುಣಮಟ್ಟದ ಹಾಗೂ ಆರೋಗ್ಯದಾಯಕ ಆಹಾರ ನಮ್ಮದಾಗುತ್ತದೆ ಎಂದರು.
ವಿದೇಶಿ ಅವಲಂಬನೆಗೆ ಮುಕ್ತಿ : ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ದೇಸಿ ಕೃಷಿ ಪದ್ಧತಿಯಿಂದ ತಪ್ಪುತ್ತದೆ. ಇದು ಆತ್ಮನಿರ್ಭರ ಭಾರತದ ಆಶಯವನ್ನು ಈಡೇರಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು. ರಾಸಾಯನಿಕಮುಕ್ತ ತರಕಾರಿಗಳನ್ನು ಮಾರಾಟ ಮಾಡುವ ರೈತರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮುಖಂಡ ಗಿರೀಶ್​ ಆರಾಧ್ಯ, ಮಹಿಳಾ ಮೋರ್ಚಾದ ವೀಣಾ, ಭಾಗ್ಯಮ್ಮ, ಪ್ರೇಮಾ ದೇವರಾಜ್​, ಮಾರುಕಟ್ಟೆಯ ದಿನೇಶ್​, ವೆಂಕಟರೆಡ್ಡಿ, ಅವತಿ ಅನಿಲ್​ ಕುಮಾರ್​ ಇದ್ದರು.