ಚಿಕ್ಕನಾಯಕನಹಳ್ಳಿ ತಾಲೂಕು Cooperative Society ಮತ್ತಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಟಿ.ಎಂ.ಹರೀಶ್, ಉಪಾಧ್ಯಕ್ಷ ವಸಂತ, ವಿಸ್ತರಣಾಧಿಕಾರಿ ಸಿದ್ಧಲಿಂಗಸ್ವಾಮಿ, ಉಪ ವ್ಯವಸ್ಥಾಪಕ ಜಿ.ಎಸ್.ಮೋಹನ್ ಕುಮಾರ್, ಸಿಇಒ ಚಂದ್ರಶೇಖರ್, ಸಿಬ್ಬಂದಿ ಹರೀಶ್, ಸುಪ್ರೀತ್ ಇದ್ದರು.
ಹಂದನಕೆರೆ: ಚಿಕ್ಕನಾಯಕನಹಳ್ಳಿ ತಾಲೂಕು ಮತ್ತಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಒಕ್ಕೂಟದ ನಿರ್ದೇಶಕ ಬಿ.ಎಂ.ಶಿವಪ್ರಕಾಶ್ ಮಾತನಾಡಿ, 45 ವರ್ಷದ ಇತಿಹಾಸ ಹೊಂದಿರುವ ಮತಿಟ್ಟ ಸಂ ಉತ್ತಮ ರೀತಿಯಲ್ಲಿ ಸಾಧನೆ ಮಾಡಿದ್ದು, 18.98 ಲಕ್ಷ ರೂ. ವಾರ್ಷಿಕ ಆದಾಯ, 7.98 ಲಕ್ಷ ರೂ. ಸಂಘದ ವಾರ್ಷಿಕ ಖರ್ಚು, 9.44 ಲಕ್ಷ ರೂ. ಲಾಭ ಪಡೆದಿದೆ ಎಂದು ತಿಳಿಸಿದರು.
ಒಕ್ಕೂಟದಿಂದ ಹಸುಗಳಿಗೆ ಇನ್ಶೂರೆನ್ಸ್ 50 ಸಾವಿರದಿಂದ 70 ಸಾವಿರಕ್ಕೆ ಹೆಚ್ಚಿಸಿದ್ದೇವೆ ಮತ್ತು ಹಾಲು ಹಾಕುವ ರೈತರು ಮರಣ ಹೊಂದಿದರೆ 50 ಸಾವಿರ ರೂ. ನೀಡಲಾಗುವುದು ಮತ್ತು ರೈತರ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತುಮಕೂರಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಹಾಲು ಕರೆಯುವ ಯಂತ್ರ ಮತ್ತು ಮೇವು ಕಟ್ ಮಾಡುವ ಯಂತ್ರ ಸಬ್ಸಿಡಿ ದರದಲ್ಲಿ ಕೊಡುತ್ತಿದ್ದೇವೆ ಎಂದರು. Cooperative Society