ಕೂಡಲೂರು ಗ್ರಾಮದ ವೆಂಕಟಾಚಲ ಎಂಬುವರ ಜಮೀನಿಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿರುವುದು.  
ರಾಜ್ಯ

ಕಾಡುಪ್ರಾಣಿಗಳ ದಾಳಿಗೆ ಮುಸುಕಿನ ಜೋಳ ನಾಶ

ಹನೂರು: ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲೂರಿನ ಜಮೀನೊಂದಕ್ಕೆ ಗುರುವಾರ ರಾತ್ರಿ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲು ನಾಶಪಡಿಸಿವೆ.
ಗ್ರಾಮದ ರೈತ ವೆಂಕಟಾಚಲ ಅವರು ಹೊರವಲಯದಲ್ಲಿ ಜಮೀನನ್ನು ಹೊಂದಿದ್ದು, 5 ಎಕರೆಯಲ್ಲಿ ಮುಸುಕಿನ ಜೋಳದ ಫಸಲನ್ನು ಬೆಳೆದಿದ್ದರು. ತೆನೆಗಳು ಫಲದಿಂದ ಕೂಡಿದ್ದು, ಇನ್ನೇನೋ ಕೆಲವು ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟಿರುವ ಕಾಡು ಪ್ರಾಣಿಗಳು ಒಂದು ಎಕರೆಯಲ್ಲಿ ಮುಸುಕಿನ ಜೋಳದ ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಇದರಿಂದ ನಷ್ಟ ಉಂಟಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೆಟಿ ನೀಡಿ ಪರಿಶೀಲಿಸುವುದರ ಮೂಲಕ ಬೆಳೆ ನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಜತೆಗೆ ಕಾಡಂಚಿನಲ್ಲಿ ಕಾಡು ಪ್ರಾಣಿಗಳ ಜಮೀನಿಗೆ ಬಾರದಂತೆ ಸೋಲಾರ್ ಬೇಲಿ ಅಥವಾ ಕಂದಕ ನಿರ್ಮಿಸುವಂತೆ ರೈತ ವೆಂಕಟಾಚಲ ಒತ್ತಾಯಿಸಿದ್ದಾರೆ.