ಪಿ. ದಾಸಪುರ ಗ್ರಾಮದ ಕೆರೆಗೆ ಮೀನುಮರಿ ಬಿಡುವ ಕಾರ್ಯಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಚಾಲನೆ ನೀಡಿದರು. ಕೆಂಪೇಗೌಡ, ದಯಾನಂದ, ವಿಕಾಸ್, ಮಾನಸ ಪುನೀತ್, ಪುಟ್ಟರಾಜು, ಯುವ ಮುಖಂಡ ಡಿ.ಕೆ. ಧರಣೇಶ್, ತಿರುಮಲೇಗೌಡ, ಮೀನಾಕ್ಷಮ್ಮ, ಪ್ರೇಮ, ಇಂದ್ರಮ್ಮ, ಇದ್ದರು. 
ರಾಜ್ಯ

ಮತ್ಸೃ ಸಂಜೀವಿನಿ ಗ್ರಾಮೀಣ ಮಹಿಳೆಯರಿಗೆ ವರದಾನ

ನುಗ್ಗೇಹಳ್ಳಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ಬೆಳ್ಳಿಮೋಡ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವ್ಯಾಪ್ತಿಯ ಪಿ. ದಾಸಪುರ ಸ್ವಸಹಾಯ ಸಂಘಗಳಿಗಾಗಿ ಮತ್ಸೃ ಸಂಜೀವಿನಿ ಯೋಜನೆಯಡಿ ದಾಸಪುರದ ಕೆರೆಗೆ ಮೀನಿನ ಮರಿ ಬಿಡುವ ಕಾರ್ಯಕ್ರಮಕ್ಕೆ ಕಾರ್ಯನಿರ್ವಹಣಾಧಿಕಾರಿ ಜಿ. ಆರ್. ಹರೀಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತ್ಸ್ಯ ಸಂಜೀವಿನಿ ಯೋಜನೆಯ ಗ್ರಾಮೀಣ ಮಹಿಳೆಯರಿಗೆ ಮೀನುಗಾರಿಕೆ ಆಧಾರಿತ ಜೀವನೋಪಾಯ ಚಟುವಟಿಕೆಗಳ ಮೂಲಕ ಆದಾಯ ಗಳಿಸಲು ಉತ್ತಮ ಅವಕಾಶ ಕಲ್ಪಿಸುತ್ತಿದ್ದು, ಸ್ವಸಹಾಯ ಸಂಘಗಳ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅರ್ಹ ಫಲಾನುಭವಿಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮೀನಿನ ಮರಿಗಳನ್ನು ಕೆರೆಗೆ ಬಿಡುವ ಮೂಲಕ ಮೀನು ಸಾಕಾಣಿಕೆಗೆ ಉತ್ತೇಜನ ನೀಡಲಾಗಿದ್ದು, ಇದರಿಂದ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಆದಾಯದ ಮೂಲ ದೊರೆಯುವ ನಿರೀಕ್ಷೆ ಇದೆ. ಯೋಜನೆಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯುವಂತೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ಸುನಿತಾ, ಸಹಾಯಕ ನಿರ್ದೇಶಕ ದಯಾನಂದ್, ಮೀನುಗಾರಿಕಾ ಸಹಾಯಕ ನಿರ್ದೇಶಕ ವಿಕಾಸ್, ಕಿಶೋರ್, ಬಾಬು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆಂಪೇಗೌಡ, ತಾಲೂಕು ವ್ಯವಸ್ಥಾಪಕಿ ಮಾನಸ ಪುನೀತ್, ಮುಖಂಡರಾದ ಪುಟ್ಟರಾಜ್, ಡಿ.ಕೆ. ಧರಣೇಶ್, ಮೀನಾಕ್ಷಮ್ಮ, ತಿರುಮಲೇಗೌಡ ಪ್ರೇಮಾ, ಲತಾಮಣಿ, ಇಂದ್ರಮ್ಮ,, ಶಾಂತಮ್ಮ, ತಾಯಮ್ಮ, ಮಸಿಯಮ್ಮ, ಕಾಳಮ್ಮ, ರಾಧಮ್ಮ, ನಾಗರತ್ನಮ್ಮ, ಇತರರಿದ್ದರು.