ಬೆಳಗಾವಿ: ಮಚ್ಛೆ ಕೈಗಾರಿಕಾ ಪ್ರದೇಶದಲ್ಲಿ ಮಟ್ಕಾ ಆಡುತ್ತಿದ್ದ ವೇಳೆ ದಾಳಿ ಮಾಡಿರುವ ಗ್ರಾಮೀಣ ಠಾಣೆ ಪೊಲೀಸರು ಬಳಗಾಮಟ್ಟಿಯ ವಿನಾಯಕ ಪಾಟೀಲ ಮತ್ತು ರಾಮಪ್ಪ ಚೌಗಲಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಚ್ಛೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಪೀರನವಾಡಿಯ ರೋಹಿತ ಮುತಗೇಕರ ಮತ್ತು ಪ್ರಕಾಶ ಜಕಬಾಳ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.