ಬೆಳಗಾವಿ: ಹಿರಿಯ ನಾಗರಿಕರ ಹಕ್ಕುಗಳಿಗಾಗಿ ಏಕರೂಪ ವೃದ್ಧಾಪ್ಯ ವೇತನ ಮತ್ತು ಎಲ್ಲ ಸೌಲಭ್ಯ ಜಾರಿಗೊಳಿಸಲು ಆಗ್ರಹಿಸಿ ಮಾ.24ರಂದು ಹುಬ್ಬಳ್ಳಿ ನೆಹರು ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎ.ವೈ.ಬೆಂಡಿಗೇರಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ 20 ಕೋಟಿ, ರಾಜ್ಯದ 80 ಲಕ್ಷ ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೆಕು. ಪ್ರತ್ಯೇಕ ಸಚಿವಾಲಯ ನಿರ್ಮಿಸಿ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಬಿಪಿಎಲ್ ಕಾರ್ಡ್ ಹೊಂದಿದ ಹಿರಿಯ ನಾಗರಿಕರಿಗಾಗಿ ಕೇಂದ್ರದಿಂದ 5 ಸಾವಿರ ರೂ. ವೃದ್ಧಾಪ್ಯ ವೇತನ ನೀಡಬೇಕು.
ಮಹಿಳಾ ಹಿರಿಯ ನಾಗರಿಕರಿಗೆ ನೀಡುತ್ತಿರುವ ಉಚಿತ ಬಸ್ ಪ್ರಯಾಣ ಹಾಗೂ ಇನ್ನಿತರ ಸೌಲಭ್ಯವನ್ನೂ ನಮಗೂ ನೀಡಬೇಕು ಎಂದರು. ಎಂ.ವಿ.ಹಿರೇಮಠ, ಎಂ.ವಿ.ಮುದಕವಿ, ಎಸ್.ಜಿ.ಸಿದ್ನಾಳ, ವಿರೂಪಾಕ್ಷಯ್ಯ ನೀರಲಗಿಮಠ, ಸುಶೀಲಾ ರಜಪೂತ, ಸಿ.ಬಿ.ಸಂಗೊಳ್ಳಿ, ಶೇಖರ ಬೋಸಲೆ, ಬಿ.ಎಚ್.ವಿನಾಯಕ, ಎಂ.ಎ.ಕೋರಿಶೆಟ್ಟಿ, ಜಿ.ಬಿ.ಚರಂತಿಮಠ ಇತರರಿದ್ದರು.