ಬೆಂಗಳೂರು: ಕೇಂದ್ರಕಾರ್ಮಿಕ ಮತ್ತು ಉದ್ಯೋಗ ಇಲಾಖೆಹೆಸರಿನಲ್ಲಿ ನಕಲಿ ವೈಬ್‌ಸೈಟ್ಸೃಷ್ಟಿಸಿರುವ ಸೈಬರ್ ವಂಚಕರು6,300 ಹುದ್ದೆಗಳ ನೇರನೇಮಕಾತಿ ಎಂಬುದಾಗಿ ಹೇಳಿಕೊಂಡುಉದ್ಯೋಗಾಕಾಂಕ್ಷಿಗಳಿಗೆ ಕೋಟ್ಯಂತರರೂ.ವಂಚನೆ ಮಾಡಿರುವುದುಬೆಳಕಿಗೆ ಬಂದಿದೆ.
ಸಾಮಾಜಿಕಜಾಲತಾಣಗಳ ಮೂಲಕ ಜಾಹೀರಾತು ಹರಡಿಸಿಯುವಕರನ್ನು ಗುರಿಯಾಗಿಸಿಕೊಂಡುನಡೆಸಿದ ಈ ವಂಚನೆ ಇದೀಗ ದೇಶವ್ಯಾಪಿಚರ್ಚೆಗೆ ಗ್ರಾಸವಾಗಿದೆ.ಕೇಂದ್ರ ಸರ್ಕಾರದ ಅಧಿಕೃತನೇಮಕಾತಿಯಂತೆ ಕಾಣುವ ರೀತಿಯಲ್ಲಿವೆಬ್‌ಸೈಟ್ ವಿನ್ಯಾಸ ಮಾಡಲಾಗಿದ್ದು,ಲೋಗೋ, ಸರ್ಕಾರಿಚಿಹ್ನೆಗಳು, ಅಧಿಕೃತಭಾಷಾಶೈಲಿ ಮತ್ತು ಆನ್‌ಲೈನ್ಅರ್ಜಿ ವ್ಯವಸ್ಥೆ ಬಳಸಿಕೊಂಡುಜನರನ್ನು ನಂಬುವಂತೆ ಮಾಡಲಾಗಿದೆ.
ಪ್ರತಿಅರ್ಜಿಗೆ ₹600ರಂತೆಸ್ವಯಂ ಪ್ರೇರಿತ ನೋಂದಣಿ ಶುಲ್ಕನಿಗದಿ ಮಾಡಲಾಗಿದೆ. 6,300 ಹುದ್ದೆಗಳಬೃಹತ್ ನೇಮಕಾತಿ ನಡೆಯುತ್ತಿದೆಎಂದು ಹೇಳಿಕೊಂಡು ಸಾವಿರಾರುಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದಾರೆ.ಸುಮಾರು 20 ದಿನಗಳಕಾಲ ವೆಬ್‌ಸೈಟ್ ನಿರ್ವಹಣೆನಡೆಸಿದೆ. ಈ ಅವಧಿಯಲ್ಲಿದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರಯುವಕರು ಅರ್ಜಿ ಸಲ್ಲಿಸಿರುವಸಾಧ್ಯತೆ ಇದೆ.
ಮೇ1 ರಂದು www.irido.org ನಕಲಿ ವೆಬ್‌ಸೈಟ್ ರಚನೆ ಮಾಡಿರುವವಂಚಕರು, ಕಾರ್ಮಿಕಇಲಾಖೆಯ ವಿವಿಧ ವಿಭಾಗದಲ್ಲಿನಖಾಲಿ ಹುದ್ದೆಗಳಿಗೆ ಅರ್ಜಿಆಹ್ವಾನಿಸಿದ್ದಾರೆ.