ಬೇಲೂರಿನ ಜೂನಿಯರ್ ಕಾಲೇಜು ಆವರಣದ ರಂಗ ಮಂದಿರದಲ್ಲಿ ಗಣಪತಿ ಸೇವಾ ಸಮಿತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪೈಂಟ್ ರವಿ, ರೇವಣ್ಣ, ಎಸ್.ಜಿ.ಪ್ರಸನ್ನ, ಬಿ.ಸಿ.ಉಮೇಶ್, ಎಂ.ವಿ.ಮಂಜುನಾಥ್, ಕೋಳಿ ಚಂದ್ರು, ಉಮಾಶಂಕರ್, ಶಿವೇಗೌಡ ಇತರರಿದ್ದರು.
- ಪೇಟೆ ಗಣಪತಿ ಸೇವಾ ಸಮಿತಿ
- ಜೂನಿಯರ್ ಕಾಲೇಜು ಆವರಣದ ರಂಗ ಮಂದಿರ
ಬೇಲೂರು; ಪೇಟೆ ಗಣಪತಿ ಸೇವಾ ಸಮಿತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಆವರಣದ ರಂಗ ಮಂದಿರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಪೇಟೆ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪೈಂಟ್ ರವಿ ಮಾತನಾಡಿ, 69 ವರ್ಷಗಳಿಂದ ಸಮಿತಿಯಿಂದ ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 21 ದಿನಗಳ ಕಾಲ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾದ್ದು, ಇದಕ್ಕೆ ಸಾರ್ವಜನಿಕರು ಹಾಗೂ ಭಕ್ತರ ಸಹಕಾರ ಅತ್ಯಂತ ಅಗತ್ಯ ಎಂದರು.
ಅ.4ರಂದು ಹೋಮ-ಹವನ ಸೇರಿದಂತೆ ವಿವಿಧ ಪೂಜೆ ನೆರವೇರಿಸಿದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗುವುದು. ಮರುದಿನ ಪಟ್ಟಣದ ರಾಜ ಬೀದಿಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿ, ಬಳಿಕ ವಿಸರ್ಜಿಸಲಾಗುವುದು ಎಂದರು.
ಬೇಲೂರು ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಪೇಟೆ ಗಣಪತಿ ಮಹೋತ್ಸವ ಜನಪ್ರಿಯವಾಗಿದೆ.ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತ ಸೌಹಾರ್ದವಾಗಿ ಮಹೋತ್ಸವವನ್ನು ಆಚರಿಸಬೇಕು ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಸನ್ನ, ಗೌರವಾಧ್ಯಕ್ಷ ಬಿ.ಸಿ.ಉಮೇಶ್, ಕಾರ್ಯಾಧ್ಯಕ್ಷ ಎಂ.ವಿ.ಮಂಜುನಾಥ್, ಮುಖಂಡರಾದ ಕೋಳಿ ಚಂದ್ರು, ಉಮಾಶಂಕರ್, ಶಿವೇಗೌಡ, ಸುನಿಲ್, ಪದ್ಮನಾಭ, ಪಿಡಿಒ ಪರಮೇಶ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು, ಬಿದಿರು ಸಹಕಾರ ಸಂಘದ ಅಧ್ಯಕ್ಷ ಕೇಬಲ್ ವಿಜಯ್ ಕುಮಾರ್, ಸುಮುಖ ರಾಜು, ಶ್ರೀಧರ್, ಕುಮಾರ್, ಪ್ರಶಾಂತ್, ವಿಶ್ವನಾಥ್, ನಿವೀತ್‌ಗೌಡ, ರಮೇಶ್, ವೆಂಕಟೇಶ್, ರಾಮಚಂದ್ರು, ಗೋಪಿನಾಥ್ ಇತರರಿದ್ದರು.