Mason murders worker for asking for wages. 
ರಾಜ್ಯ

ಕೂಲಿ ಹಣ ಕೇಳಿದ್ದಕ್ಕೆ ಹತ್ಯೆ ಮಾಡಿದ ಮೇಸ್ತ್ರಿ

ಶ್ರೀನಿವಾಸಪುರ: ಮಾಡಿದ ಕೆಲಸಕ್ಕೆ ತಕ್ಕಂತೆ 3 ಸಾವಿರ ರೂ. ಕೂಲಿ ಕೇಳಿದ ಕಾರ್ಮಿಕನನ್ನು ಮೇಸ್ತ್ರಿ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವುದು ಕೂಳಗುರ್ಕಿಯನ್ನೇ ಬೆಚ್ಚಿ ಬೀಳಿಸಿದೆ.
ಕೂಳಗುರ್ಕಿ ಗ್ರಾಮದ ವಸಂತಪ್ಪ (45) ಮೃತ ಕಾರ್ಮಿಕ. ಗಾರೆ ಮೇಸ್ತ್ರಿ ಆಂಜಿ ಎಂಬಾತನ ಬಳಿ ವಸಂತಪ್ಪ ಕೆಲಸ ಮಾಡಿದ್ದರು. ಕೆಲಸದ ನಂತರ ಹಣ ನೀಡಿರಲಿಲ್ಲ.
ಮಂಗಳವಾರ ರಾತ್ರಿ ಮೂರು ಸಾವಿರ ರೂ. ಕೊಡುವಂತೆ ಮೇಸ್ತಿಯನ್ನು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು. ಮೇಸ್ತ್ರಿ ಆಂಜಿ ವಸಂತಪ್ಪ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ದೊಣ್ಣೆಯಿಂದ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿದ್ದಾನೆ.
ಇದೇ ವೇಳೆ ಅಡ್ಡ ಬಂದ ವಸಂತಪ್ಪ ಸಂಬಂಧಿಯೊಬ್ಬರ ಮೇಲೂ ಹಲ್ಲೆ ಮಾಡಿದ್ದರಿಂದ ಅವರು ಅಲ್ಲಿಂದ ಓಡಿ ಹೋಗಿದ್ದಾರೆ. ಗಂಭೀರ ಗಾಯಗೊಂಡ ವಸಂತಪ್ಪ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದ ಶ್ರೀನಿವಾಸಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ತಂಡ ರಚಿಸಲಾಗಿದೆ. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.