Marulasiddheshwaraswamy festival is a success.
ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಸಾಸಲು ಗ್ರಾಮದ ಶ್ರೀ ಬನಶಂಕರಿ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು. \
20 ವರ್ಷಗಳ ಬಳಿಕ ನಡೆದ ಜಾತ್ರೆ ಭಕ್ತಾದಿಗಳಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಹರ್ಷ ತಂದಿತ್ತು. ಜಾತ್ರೆ ಅಂಗವಾಗಿ ನೂರೊಂದು ಎಡೆ ಸೇವೆ ಉತ್ಸವಗಳು, ಅಗ್ನಿ ಕೊಂಡ್ಯೋತ್ಸವ ನೆರವೇರಿಸಲಾಯಿತು. ಶಾಸಕ ಸಿ.ಬಿ.ಸುರೇಶ್ ಬಾಬು, ತಾಹಸೀಲ್ದಾರ್ ಮಮತಾ ಇದ್ದರು.