Married man cheats on young woman 
ರಾಜ್ಯ

ಯುವತಿಗೆ ವಂಚಿಸಿದ ವಿವಾಹಿತ

ಚಿಕ್ಕಬಳ್ಳಾಪುರ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಿವಾಹಿತನೊಬ್ಬ ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಗೇಪಲ್ಲಿ ಮೂಲದ ಟೇಲರ್​ ರಮೇಶ್​ (46) ಆರೋಪಿ. 20 ವರ್ಷದ ಯುವತಿ ಟೇಲರ್​ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿದ್ದು ರಹಸ್ಯವಾಗಿ ತಾಳಿ ಕಟ್ಟಿದ ಬಳಿಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಯುವತಿಯೊಂದಿಗೆ ಸಂಸಾರ ನಡೆಸಿದ್ದಾನೆ. ಕೊನೆಗೆ ಆಕೆಗೆ ಕೈ ಕೊಟ್ಟು ಬಾಗೇಪಲ್ಲಿಗೆ ವಾಪಸ್ಸಾಗಿದ್ದು ಇದರಿಂದ ಸಂತ್ರಸ್ತೆಯು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾಳೆ.
ಮದುವೆಯಾಗಿರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ತಾಳಿ ಕಟ್ಟಿ ಎರಡು ತಿಂಗಳು ಜತೆಯಲ್ಲಿ ಸಂಸಾರ ನಡೆಸಿದ ಬಳಿಕ ಬಿಟ್ಟು ಹೋಗಿದ್ದು ಈಗ ಇಬ್ಬರೂ ಹೆಂಡತಿಯರು ಬೇಡ ಎಂಬುದಾಗಿ ಹೇಳಿ ವಂಚಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.