ಒತ್ತುವರಿ ತೆರವಿಗೆ ಮಾರ್ಕಿಂಗ್​ Marking 
ರಾಜ್ಯ

ಒತ್ತುವರಿ ತೆರವಿಗೆ ಮಾರ್ಕಿಂಗ್​ Marking

ಕೋಲಾರ ಡೆಸ್ಕ್
ಬಂಗಾರಪೇಟೆ: ಕಸಬಾ ವ್ಯಾಪ್ತಿಯ ಕಾರಹಳ್ಳಿ ಬಳಿಯ ರಾಜಕಾಲುವೆ ಒತ್ತುವರಿ ತೆರವಿಗೆ ನಗರಸಭೆ, ಕಂದಾಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಕಿಂಗ್​ ಮಾಡಿದರು.Marking
ಸ್ಥಳಿಯರ ದೂರಿನ ಹಿನ್ನೆಲೆ ಜಿಲ್ಲಾಧಿಕಾರಿ ರಾಜಕಾಲುವೆ ಒತ್ತುವರಿ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳಿಯ ತಹಸೀಲ್ದಾರ್​ಗೆ ನಿರ್ದೇಶನ ಮಾಡಿದ್ದರು. ಅದರಂತೆ ಸರ್ವೇ ಅಧಿಕಾರಿಗಳು ಗ್ರಾಮ ನಕ್ಷೆ ಆಧಾರದ ಮೇಲೆ ಒತ್ತುವರಿ ಮಾಡಿರುವುದುನ್ನು ಪತ್ತೆ ಹಚ್ಚಿ ತಹಸೀಲ್ದಾರ್​ಗೆ ವರದಿ ಸಲ್ಲಿಸಿದ್ದರು.
ಲೋಕಾಯುಕ್ತ ಕಚೇರಿಯಿಂದ ರಾಜಕಾಲುವೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾ.7ರ ಒಳಗೆ ಮಾಹಿತಿ ಸಲ್ಲಿಸಲು ತಹಸೀಲ್ದಾರ್​ಗೆ ನಿರ್ದೇಶಿಸಲಾಗಿತ್ತು. ಹೀಗಾಗಿ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳ ಗುರುತಿಸಿ ಮಾರ್ಕಿಂಗ್​ ಮಾಡಲಾಗಿದೆ.