ಸಂತೆಯಲ್ಲಿ ಪುಂಡರ ಗಲಾಟೆ 
ರಾಜ್ಯ

ಸಂತೆಯಲ್ಲಿ ಫುಂಡರ ಅಟ್ಟಹಾಸ

ಪ್ರಮುಖ ಮುಖ್ಯಾಂಶಗಳು

  • ಸಂಕೇಶ್ವರ ಸಂತೆಯಲ್ಲಿ ಪುಂಡರ ಅಟ್ಟಹಾಸ
  • ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ
  • ಸಾರ್ವಜನಿಕವಾಗಿ ಅಸಭ್ಯ ವರ್ತನೆ
  • ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು

ಸಂತೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದ ಫುಂಡರು
ಚಿಕ್ಕೋಡಿ: ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯುವಕರ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ,ಸಿಕ್ಕ ಸಿಕ್ಕವರ ಮೇಲೆ ಬೇಕಾಬಿಟ್ಟಿ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಸಂತೆ ದಿನ ಶುಕ್ರವಾರ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು.ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ ಕೈಯಲ್ಲಿ ಕತ್ತರಿ, ಕಟ್ಟಿಗೆ ಹಾಗೂ ಮದ್ಯದ ಬಾಟಲಿಗಳಿಂದ ಹಲ್ಲೆ ಮಾಡಲು ಮುಂದಾಗಿದ್ದು,ಇಬ್ಬರ ಮೇಲೆ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಇವರನ್ನು ಬೆನ್ನತ್ತಿದ ಪೊಲೀಸರು ಕಮತನೂರ ಗೆಟ್ ಬಳಿ ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ.ಗಲಾಟೆ ಮಾಡಿದ ಗೋಕಾಕ ಮೂಲದ ಐವರು ಆರೋಪಿಗಳ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಂಕೇಶ್ವರ ಪೊಲೀಸ್ ರು ತಿಳಿಸಿದ್ದಾರೆ.