ಸಕಲೇಶಪುರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ವತಿಯಿಂದ ಪಾದಯಾತ್ರೆ ನಡೆಯಿತು. ಎಂ.ಸಿ.ಡೋಂಗ್ರೆ, ಹರೀಶ್, ಸುವರ್ಣಾ, ರಾಜು ಇತರರಿದ್ದರು.
- ಭಾರತ ಕಮ್ಯೂನಿಸ್ಟ್ ಪಕ್ಷ
- ಕಾರ್ಯಕರ್ತರು ಪರಿವರ್ತನೆಗಾಗಿ ಪಾದಯಾತ್ರೆ
ಕೇಂದ್ರದಲ್ಲಿ ರಾಜಕೀಯ ಬದಲಾವಣೆಯಾಗಲೇ ಬೇಕು ಎಂದು ಒತ್ತಾಯಿಸಿ ಶುಕ್ರವಾರ ಪಟ್ಟಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಪರಿವರ್ತನೆಗಾಗಿ ಪಾದಯಾತ್ರೆ ನಡೆಸಿದರು.
ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಮುಖ್ಯಬೀದಿಯಿಂದ ಆರಂಭವಾದ ಪಾದಯಾತ್ರೆ, ಹಳೇ ಬಸ್ ಸ್ಟ್ಯಾಂಡ್‌ನಲ್ಲಿ ಅಂತ್ಯಗೊಂಡಿತು.
ಪಟ್ಟಣದ ಹಳೇ ಬಸ್ ಸ್ಟ್ಯಾಂಡ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಎಂ.ಸಿ.ಡೋಂಗ್ರೆ, ಒಂದು ದಶಕದಲ್ಲಿ ಕೇಂದ್ರದ ಸಾಧನೆ ಶೂನ್ಯ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಬೆಲೆಗಳು ಗಗನಮುಖಿಯಾಗಿದ್ದು, ಬಡವರು ಬದುಕುವುದೇ ಕಷ್ಟಕರವಾಗಿದೆ. ಪೆಟ್ರೋಲ್ ನೀತಿ ತೀರ ಬೇಸರ ತರುವಂತಿದ್ದು, ಕಚ್ಚಾತೈಲ ಬೆಲೆ ಕುಸಿತಗೊಂಡರೂ ಪೆಟ್ರೋಲ್ ಬೆಲೆ ಇಳಿಯದಿರುವುದರ ಹಿಂದೆ ಉದ್ಯಮಿಗಳ ಕೈವಾಡವಿದೆ ಎಂದು ಆರೋಪಿಸಿದರು.
ನಿರುದ್ಯೋಗ ನಿಯಂತ್ರಕ್ಕೆ ಕಡಿವಾಣ ಇಲ್ಲದಿರುವುದು ಒಂದೆಡೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ನೀತಿಯಿಂದ ದೇಶದ ಮಾನ ಹರಾಜಾಗುತ್ತಿರುವುದು ಮತ್ತೊಂದೆಡೆ. ಈ ನಡುವೆ ರಾಜ್ಯದಲ್ಲಿ ಅಧಿಕಾರಿದಲ್ಲಿರುವ ಕಾಂಗ್ರೆಸ್ ಸರ್ಕಾರ ಸಹ ಕಾರ್ಮಿಕರ ಪರವಾಗಿ ಯಾವುದೇ ನೀತಿಯನ್ನು ಜಾರಿಗೊಳಿಸಿಲ್ಲ. ಈ ಹಿಂದೆ ರಾಜದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂಸುಧಾರಣಾ ನೀತಿಯನ್ನು ರದ್ದುಪಡಿಸುವ ಭರವಸೆ ನೀಡಿ ಸುಮ್ಮನಾಗಿದೆ. ಕೆಪಿಎಸ್ಸಿ ಕರ್ಮಕಾಂಡದ ನಿಷ್ಪಕ್ಷಪಾತ ತನಿಖೆಯಾಗಬೇಕು. ವಲಸಿಗರ ಮಕ್ಕಳಿಗೆ ವಿದ್ಯಾಭ್ಯಾಸ ಜಾರಿಗೊಳಿಸಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟು ಆ.14 ರವರೆಗೆ ದೇಶಾದ್ಯಂತ ಪರಿವರ್ತನಾ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಪಾದಯಾತ್ರೆಯಲ್ಲಿ ತಾಲೂಕು ಕಾರ್ಯದರ್ಶಿ ಹರೀಶ್, ಸುವರ್ಣಾ, ರಾಜು ಇತರರಿದ್ದರು.