ರಾಗಿ ಖರೀದಿ ನೋಂದಣಿಗೆ ಹಲವು ವ್ನಿಘ್ನ millet ರಾಗಿ 
ರಾಜ್ಯ

ರಾಗಿ ಖರೀದಿ ನೋಂದಣಿಗೆ ಹಲವು ವ್ನಿಘ್ನ millet

ಪ್ರಮುಖ ಮುಖ್ಯಾಂಶಗಳು

  • millet
  • kolar
ವಿ.ಶಿವಾರೆಡ್ಡಿ ಬಂಗಾರಪೇಟೆ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಲು ಮುಂದಾಗಿರುವ ರೈತರಿಗೆ ಆರಂಭದಲ್ಲೇ ಹಲವು ವ್ನಿಗಳು ಎದುರಾಗಿವೆ.
ಸರ್ಕಾರ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಕಳೆದ ಹಲವು ವರ್ಷಗಳಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ರಾಗಿ ಖರೀದಿ ಕೇಂದ್ರ ತೆರೆದಿದೆ. ಕೇಂದ್ರದ ಮೂಲಕ ರಾಗಿಯನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡುವ ಮೂಲಕ ಸರ್ಕಾರ ರೈತರ ಆರ್ಥಿಕ ಪ್ರಗತಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿದ ವರ್ಷದಿಂದ ಈ ವರ್ಷ ಹೆಚ್ಚಿನ ಬೆಲೆ ನಿಗದಿ ಮಾಡಿದ್ದು, ಪ್ರತಿ ಕ್ವಿಂಟಾಲ್​ ರಾಗಿಯನ್ನು 4,889 ರೂ.ಗೆ ಖರೀದಿ ಮಾಡಲಾಗುತ್ತಿದೆ. ಈ ವರ್ಷ ಸುಮಾರು 6 ಲಕ್ಷ ಮೆಟ್ರಿಕ್​ ಟನ್​ ರಾಗಿ ಖರೀದಿಸುವ ಗುರಿ ಹೊಂದಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್​ ರಾಗಿಗೆ 4,290 ರೂ.ಗಳಂತೆ ಖರೀದಿ ಮಾಡಿತ್ತು. millet
ಆದರೆ, ನೋಂದಣಿ ಮಾಡಿಕೊಳ್ಳಲು ಬರುತ್ತಿರುವವರಿಗೆ ಸಮಸ್ಯೆ ನಿವಾರಣೆಗೆ ಪದೇಪದೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಅಕ್ರಮ ತಡೆಯುವ ಉದ್ದೇಶದಿಂದ ರಾಗಿ ಮಾರಾಟದ ನೋಂದಣಿಗೆ ರೈತರಿಂದ ಬಯೋಮೆಟ್ರಿಕ್​ ಕಡ್ಡಾಯ ಮಾಡಲಾಗಿದೆ. ಆದರೆ, ಬಯೋಮೆಟ್ರಿಕ್​ ತೊಡಕಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಕುಟುಂಬದ ಮುಖ್ಯಸ್ಥರ ಬಯೋಮೆಟ್ರಿಕ್​ ತೆಗೆದುಕೊಂಡಿಲ್ಲ ಎಂದರೆ ಕುಟುಂಬದಲ್ಲಿ ಯಾರಾದರೂ ಬಂದು ಬಯೋಮೆಟ್ರಿಕ್​ ನೀಡಿ ಪಡಿತರ ಪಡೆಯಬಹುದು. ಆದರೆ, ರಾಗಿ ಮಾರಾಟಕ್ಕೆ ಪಹಣಿಯಲ್ಲಿ ಹೆಸರು ನಮೂದಿಸಲ್ಪಟ್ಟಿರುವ ರೈತರೇ ಬಯೋಮೆಟ್ರಿಕ್​ ನೀಡಬೇಕಿದ್ದು, ವಯಸ್ಸಾದ ಹಾಗೂ ಇನ್ನಿತರರ ಕಾರಣಗಳಿಂದ ಬಯೋಮೆಟ್ರಿಕ್​ ಸ್ವೀಕಾರ ಆಗುತ್ತಿಲ್ಲ. ಇದರಿಂದ ನೋಂದಣಿ ಮಾಡಿಸುವಷ್ಟರಲ್ಲಿ ರೈತರು ಹೈರಾಣಾಗಿದ್ದಾರೆ.
ಮತ್ತೊಂದೆಡೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆದಿದ್ದರೂ ್ರೂಟ್​ ತಂತ್ರಾಂಶದಲ್ಲಿ ರಾಗಿ ಬೆಳೆ ಎಂಬುದು ಕಣ್ಮರೆಯಾಗಿರುವುದು ಸಮಸ್ಯೆಯಾಗಿದೆ. ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆದಾರ ಜಮೀನಿನಲ್ಲಿರುವ ರಾಗಿ ಬದಲಾಗಿ ಬೇರೊಂದು ಬೆಳೆ ಅಥವಾ ಬೆಳೆ ಇಲ್ಲವೆಂದು ನಮೂದು ಮಾಡಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತರು ನಿತ್ಯ ಕೃಷಿ ಮತ್ತು ಕಂದಾಯ ಇಲಾಖೆಗಳಿಗೆ ಎಡತಾಕುವಂತಾಗಿದೆ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿಗೆ ಉತ್ತಮ ಬೆಲೆ ನಿಗದಿ ಮಾಡಿದೆಯಾದರೂ, ಮಾರಾಟ ಮಾಡಲು ಎದುರಾಗಿರುವ ಸಮಸ್ಯೆಗಳಿಗೆ ಅಧಿಕಾರಿಗಳು ಮುಕ್ತಿ ಕೊಡಿಸಬೇಕಿದೆ.
ದೊಡ್ಡ ರೈತರಿಗೆ ಶುಕ್ರದೆಸೆ: ಈ ಹಿಂದೆ ಪ್ರತಿ ಎಕರೆಗೆ 10 ಕ್ವಿಂಟಾಲ್​ನಂತೆ ಗರಿಷ್ಠ 20 ಕ್ವಿಂಟಾಲ್​ವರೆಗೂ ಒಬ್ಬ ರೈತ ರಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ ಈ ವರ್ಷ 59 ಕ್ವಿಂಟಾಲ್​ವರೆಗೂ ಅವಕಾಶ ನೀಡಿರುವುದರಿಂದ ದೊಡ್ಡ ರೈತರಿಗೂ ಶುಕ್ರದೆಸೆ ಬಂದಂತಾಗಿದೆ.

ರಾಗಿ ಮಾರಾಟ ಬೆಳೆಗಾರರ ಹೆಸರನ್ನು ಆಧಾರ್​ ಸಂಖ್ಯೆ ಆಧಾರದ ಮೇಲೆ ಬಯೋಮೆಟ್ರಿಕ್​ ಮೂಲಕ ನೋಂದಣಿ ಮಾಡಲಾಗುತ್ತಿದೆ. ಆಧಾರ್​ ಮಾಡಿಸಿ 15 ವರ್ಷ ಆಗಿರುವ ವೃದ್ಧರ ಥಂಬ್​ ನೋಂದಣಿಗೆ ತೆಗೆದುಕೊಳ್ಳಲು ಆಗದೆ ಸಮಸ್ಯೆ ಎದುರಾಗುತ್ತಿದೆ. ಅಂತಹವರು ಆಧಾರ್​ ಕೇಂದ್ರಕ್ಕೆ ಹೋಗಿ ಮತ್ತೆ ನವೀಕರಿಸಬೇಕು. ಆಗ ನೋಂದಣಿ ಸಾಧ್ಯವಾಗುತ್ತದೆ.

ಮನೋಹರ್​ ವ್ಯವಸ್ಥಾಪಕ, ಸಗಟು ಮಳಿಗೆ, ಬಂಗಾರಪೇಟೆ.