ಶಹಾಬಾದ್​ ನಿಜಾಮ ಬಜಾರ್​ನ ಶ್ರೀ ಸದ್ಗುರು ಸದಾಶಿವ ಬೆಂಕಿತಾತಾ ಮಠದಲ್ಲಿ ಕಿರಿಯ ಪೂಜ್ಯ ಶ್ರೀ ಸದ್ಗುರು ಮಂಗಲಸಿಂಗ್​ ಬೆಂಕಿತಾತಾ ಅವರು ಅಧಿಕಾರ ವಹಿಸಿಕೊಂಡರು.  
ರಾಜ್ಯ

ಮಂಗಲಸಿಂಗ್​ ಬೆಂಕಿತಾತಾ ಅಧಿಕಾರ ಸ್ವೀಕಾರ

ಶಹಾಬಾದ್​: ಗೋಳಾ (ಕೆ) ಗ್ರಾಮದ ನಿಜಾಮ ಬಜಾರ್​ ಬಡಾವಣೆಯ ಸದ್ಗುರು ಸದಾಶಿವ ಬೆಂಕಿ ತಾತಾ ಮಠದ ಪೀಠಾಧಿಪತಿಯಾಗಿ ಕಿರಿಯರಾದ ಶ್ರೀ ಸದ್ಗುರು ಮಂಗಲಸಿಂಗ್​ ಬೆಂಕಿತಾತಾ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಯನಗುಂಟಿಯ ಸದ್ಗುರು ಶ್ರೀ ಸದಾಶಿವ ಬೆಂಕಿತಾತ ಮಠದಿಂದ ಗುರುವಾರ ಸಂಜೆ ಪುರಪ್ರವೇಶ ಮಾಡಿದರು. ಸ್ಥಳಿಯ ಭಕ್ತರು ಭವ್ಯ ಸ್ವಾಗತ ಕೋರಿದರು. ಶ್ರೀಮಠದ ಕಿರಿಯ ಪೂಜ್ಯರಾಗಿ ಅಧಿಕಾರಿ ವಹಿಸಿಕೊಂಡು, ಪ್ರತಿ ಗುರುವಾರ, ಶುಕ್ರವಾರ, ಭಾನುವಾರ, ಅಮಾವಾಸ್ಯೆ ದಿನದಂದು ಶಹಾಬಾದ್​ ಮಠ ಹಾಗೂ ಪ್ರತಿ ಸೋಮವಾರ, ಮಂಗಳವಾರ, ಹುಣ್ಣಿಮೆ ದಿನ ಯನಗುಂಟಿಯ ಮೂಲ ಮಠದಲ್ಲಿ ಭಕ್ತರ ಭೇಟಿಗೆ ಲಭ್ಯವಿರುವುದಾಗಿ ಹೇಳಿದರು. ಮಠ ಅಧ್ಯಕ್ಷ ಗುಂಡೇರಾವ ಮಾಣಿಕ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಣಮೇಶ್ವರ, ಪ್ರಮುಖರಾದ ಸುರೇಂದ್ರಸಿಂಗ್​ ಠಾಕೂರ್​, ಶಂಭುಲಿಂಗ ನಾಯ್ಕಲ್​, ವಿಶ್ವನಾಥ ರಾಠೋಡ್​, ಛೋಟು ಖಾಸೀಂಸಾಬ್​, ಹೈಯಾಳಪ್ಪ, ರಮೇಶ ಭಟ್ಟ, ರಾಕೇಶ ಮಾಣಿಕ ಇತರರಿದ್ದರು.