ಯಾದಗಿರಿ ನವನಂದಿ ಶಾಲೆಯಲ್ಲಿ ಮಂಗಳವಾರ ಮಣ್ಣೇತ್ತಿನ ಅಮಾವ್ಯಾಸೆ ನಿಮಿತ್ತ ಮಕ್ಕಳಿಂದ ಮಣ್ಣಿನ ಎತ್ತುಗಳನ್ನು ತಯಾರಿಸಲಾಯಿತು. 
ರಾಜ್ಯ

ಮಣ್ಣಿನಿಂದ ಎತ್ತುಗಳು ತಯಾರಿಸಿದ ಮಕ್ಕಳು

ಪ್ರಮುಖ ಮುಖ್ಯಾಂಶಗಳು

  • ನವನಂದಿ ಶಾಲೆಯಲ್ಲಿ ವಿಶೇಷ ಮಣ್ಣೇತ್ತಿನ ಅಮಾವಾಸ್ಯೆ ಆಚರಣೆ
ಯಾದಗಿರಿ: ಇಲ್ಲಿನ ನವನಂದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಣ್ಣೇತ್ತಿನ ಅಮಾವಾಸ್ಯೆಯನ್ನು ಮಂಗಳವಾರ ವಿಶೇಷವಾಗಿ ಆಚರಿಸಲಾಯಿತು. ಭಾರತೀಯ ಸಂಸ್ಕೃತಿಯಡಿ ಆಚರಿಸಲಾಗುವ ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥ ಇರುವ ಹಿನ್ನೆಲೆಯಲ್ಲಿ ಇದನ್ನು ಮಕ್ಕಳಿಗೆ ಗೊತ್ತಾಗಬೇಕೆನ್ನುವ ದೃಷ್ಟಿಯಿಂದ ಅವರಿಂದಲ್ಲೇ ಮಣ್ಣಿನಿಂದ ಎತ್ತುಗಳನ್ನು ಸಿದ್ದಪಡಿಸಿ ಅದರ ವೈಶಿಷ್ಟ್ಯ ತಿಳಿಸಿ ಆಚರಿಸಲಾಯಿತು. ನಂತರ ಶಾಲೆ ಮುಖ್ಯದ್ವಾರದಲ್ಲಿ ಮಂಟಪ ಸಿದ್ದಪಡಿಸಿ ಮಕ್ಕಳು ತಯಾರಿಸಿದ ಮಣ್ಣಿನ ಎತ್ತುಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ಶಾಲೆ ಅಧ್ಯಕ್ಷ ಬಸವರಾಜ ಎಲ್ಹೇರಿ ಅವರು, ದೇಶಕ್ಕೆ ಅನ್ನ ನೀಡುವ ರೈತನಿಗೆ ಎತ್ತುಗಳೇ ಆಧಾರ ಸ್ಥಂಭ. ವ್ಯವಸಾಯ ಮಾಡುವ ಪ್ರತಿ ರೈತನಿಗೆ ಜೀವಾಳಗಳೇ ಈ ಎತ್ತುಗಳು. ಈ ಅಮಾವಾಸ್ಯೆಯಂದು ಅವುಗಳನ್ನು ದೇವರ ಸಮಾನವೆಂದು ಪೂಜಿಸಲಾಗುತ್ತದೆ ಎಂದರು. ಪ್ರಾಚಾರ್ಯ ರೇವಣಸಿದ್ದಪ್ಪ ಮಲಕೂಡ, ಉಪ ಪ್ರಾಚಾರ್ಯ ವಿಜಯಲಕ್ಷಿ÷್ಮÃ, ಸಂಯೋಜಕಿ ಜಯಲಕ್ಷಿ÷್ಮ ಪಾಟೀಲ್ ಇತರರಿದ್ದರು.