ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ
ಈ ಸಂಬಂಧ ಇಲಾಖೆ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಅವರು, ಗ್ರಾಪಂಗಳಿಗೆ ಪೂರ್ವ ಮಾಹಿತಿ ನೀಡದೇ ಭೇಟಿ ಕೊಡಬೇಕು. ಹಾಜರಾತಿ, ಪಿಡಿಒ ಮತ್ತು ತಾಲೂಕು ಸಿಇಒಗಳ ಕಾರ್ಯವೈಖರಿ ಪರಾಮರ್ಶಿಸಬೇಕು. ಜನರ ಆಹವಾಲು ಆಲಿಸಿ ಸ್ಥಳದಲ್ಲೇ ಇತ್ಯರ್ಥವಾಗುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
31 ಜಿಲ್ಲೆಗಳಲ್ಲಿ 5,900ಕ್ಕೂ ಅಧಿಕ ಗ್ರಾಪಂಗಳಿದ್ದು, ಗ್ರಾಮಾಭಿವೃದ್ಧಿಗೆ ಸಿಇಒಗಳು ಗಮನಹರಿಸಬೇಕು. ಜಲ ಜೀವನ ಮಿಷನ್, ವಿಬಿ ಜಿ ರಾಮ್ ಜಿ, ಪ್ರಧಾನಮಂತ್ರಿ ವಸತಿ ಯೋಜನೆ (ಗ್ರಾಮೀಣ) ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಮುಖ್ಯಮಂತ್ರಿಗಳ ರಸ್ತೆ ಯೋಜನೆ ಇತ್ಯಾದಿಗಳ ಸಮರ್ಪಕ ಅನುಷ್ಠಾನ ಆಗುತ್ತಿದೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಿದರೆ ಕಾಮಗಾರಿಗಳು ಚುರುಕಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.