ಬಸವಕಲ್ಯಾಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿದರು. ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಶಿವಾನಂದ ಮೇತ್ರೆ, ಇಒ ರಮೇಶ ಸುಲ್ಪಿ, ಮಹಾದೇವ ಜಮ್ಮು, ಸಿಡಿಪಿಒ ಗೌತಮ ಶಿಂಧೆ ಇದ್ದರು. 
ರಾಜ್ಯ

ಚುನಾವಣಾ ಆಯೋಗದ ಆದೇಶ ಕಡ್ಡಾಯ ಪಾಲಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಎಸಿ ಪ್ರಕಾಶ ಕುದರಿ ಸೂಚನೆ
  • ಬಸವಕಲ್ಯಾಣ ತಾಪಂನಲ್ಲಿ ಸಭೆ
ಬಸವಕಲ್ಯಾಣ: ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಯೋಗ ಹೊರಡಿಸಿರುವ ಆದೇಶವನ್ನುಕಡ್ಡಾಯವಾಗಿ ಪಾಲಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ನಿಮಿತ್ತ ಓಟರ್​ ಫೆಸಿಲಿಟೇಶನ್​ ಕ್ಯಾಂಪ್​ ಹಾಗೂ ಬಿಎಲ್​ಒ ಫೆಸಿಲಿಟೇಶನ್​ ಕ್ಯಾಂಪ್​ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅನೂಕುಲಕ್ಕಾಗಿ ಕೇಂದ್ರಗಳಲ್ಲಿ ದತ್ತಾಂಶ ನಮೂದು ಸಹಾಯಕರನ್ನು ನಿಯೋಜಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರಗಳಲ್ಲಿ ಅಗತ್ಯವಿರುವ ಕಂಪ್ಯೂಟರ್​, ವೈಫೈ ಸೌಲಭ್ಯ, ಸ್ಕಾನರ್​, ಪ್ರಿಂಟರ್​ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಾಜಿ ಅಧ್ಯಕ್ಷರ ಹಾಗೂ ಸ್ವ&ಸಹಾಯ ಸಂದ ಮಹಿಳೆಯರ ಸಹಾಯ ಪಡೆದುಕೊಳ್ಳಬೇಕು ಎಂದು ಪಿಡಿಒಗಳಿಗೆ ಸಲಹೆ ನೀಡಿದರು.
ತಹಸೀಲ್ದಾರ್​ ಡಾ. ದತ್ತಾತ್ರೇಯ ಗಾದಾ ಮಾತನಾಡಿ, ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮತ್ತು ರದ್ದುಪಡಿಸುವ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿ ಮತ್ತು ಮಾನದಂಡ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ ಸುಲ್ಪಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಪ್ರಚಾರ ಕೈಗೊಳ್ಳುವುದು ಮತ್ತು ತಾಂತ್ರಿಕ ಹಾಗೂ ಮೂಲ ಸೌಕರ್ಯ ಒದಗಿಸಿಕೊಡುವುದು ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಇದನ್ನು ತಪ್ಪದೇ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಹುಲಸೂರ ತಹಸೀಲ್ದಾರ್​ ಶಿವಾನಂದ ಮೇತ್ರೆ, ಹುಲಸೂರ ಇಒ ಮಹಾದೇವ ಜಮ್ಮು, ಸಿಡಿಪಿಒ ಗೌತಮ ಶಿಂಧೆ, ಪಿಡಿಒ ಹಾಗೂ ತಹಸಿಲ್​ ಕಚೇರಿಯ ಎಲ್ಲ ಸಿಬ್ಬಂದಿ ಇದ್ದರು.