ಔರಾದ್ ತಾಪಂ ಸಭಾಂಗಣನಲ್ಲಿ ಶನಿವಾರ ಕರೆದಿದ್ದ ತಾಲೂಕು ಮಟ್ಟದ ಮಕ್ಕಳ ರಣಾ ವ್ಯವಸ್ಥೆ ಕುರಿತ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಮಾತನಾಡಿದರು. ಶಾರದಾ ಕಲ್ಮಾಕರ, ಮಹೇಶ ಪಾಟೀಲ್, ಕಿರಣ ಪಾಟೀಲ್, ಗೌರಿಶಂಕರ ಪರ್ತಾಪುರೆ, ರೂಪಾ ಕೋಟೆಗೌಡರ್, ಸುನೀಲಕುಮಾರ ವಾಘಮಾರೆ, ಸಂಗೀತಾ, ಉತ್ತಮ ಸಂಘನಾಯಕ, ವಾಗಂಬರ ಗಾಯಕವಾಡ, ರಾಹುಲ ರತ್ನಾಕರ ಇತರರಿದ್ದರು.
ಔರಾದ್ : ಎಲ್ಲ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕು. ಮಕ್ಕಳ ರಕ್ಷಣಾ ನೀತಿ-2016ರ ಕಡ್ಡಾಯವಾಗಿ ಅನುಷ್ಠಾನ ಮಾಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣನಲ್ಲಿ ಶನಿವಾರ ಕರೆದಿದ್ದ ತಾಲೂಕು ಮಟ್ಟದ ಮಕ್ಕಳ ರಣಾ ವ್ಯವಸ್ಥೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು, ಎಲ್ಲ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು ಸರ್ಕಾರದ ನಿಯಾಮವಳಿ ಪ್ರಕಾರ ನೋಂದಣಿಯಾಗಬೇಕು. ಅನಧಿಕೃತ ಕೋಚಿಂಗ್ ಸೇಂಟರ್ಗಳನ್ನು ಮುಚ್ಚಿಸಬೇಕು ಎಂದು ಬಿಇಒ ಅವರಿಗೆ ತಿಳಿಸಿದರು.
ತಾಲೂಕಿನಲ್ಲಿ ಎರಡು ಸಲ ಬಾಲಕಾರ್ಮಿಕ ಮಕ್ಕಳ ರಕ್ಷಣೆ ಕಾರ್ಯಾಚರಣೆ ಮತ್ತು ಚಿಂದಿ ಆಯುವ ಮಕ್ಕಳ ರಕ್ಷಣೆ ಕಾರ್ಯಾಚರಣೆ ಮಾಡುವಂತೆ ಕಾರ್ಮಿಕ ನಿರೀಕ್ಷಕರಿಗೆ ಹೇಳಿದರು.
ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಸತಿ ಶಾಲೆಗಳ ಮಕ್ಕಳ ಮೂಲಸೌಕರ್ಯ ದೊರಕಿಸಿಕೊಡಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಕಲ್ಮಾಕರ, ತಹಸೀಲ್ದಾರ್ ಮಹೇಶ ಪಾಟೀಲ್, ತಾಪಂ ಇಒ ಕಿರಣ ಪಾಟೀಲ್, ಗೌರಿಶಂಕರ ಪರ್ತಾಪುರೆ, ಸಿಡಿಪಿಒ ರೂಪಾ ಕೋಟೆಗೌಡರ್, ಸುನೀಲಕುಮಾರ ವಾಘಮಾರೆ, ಸಂಗೀತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಅನೀಲಕುಮಾರ, ಡಾ.ರಮಣ, ಅನಿತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉತ್ತಮ, ಬಿಇಒ ವಾಗಂಬರ ಗಾಯಕವಾಡ, ಕಾರ್ಮಿಕ ಇಲಾಖೆ ರಾಹುಲ್ ರತ್ನಾಕರ, ಪ್ರಕಾಶ ರಾಠೋಡ್, ಸುನೀಲಕುಮಾರ ವಾಘಮಾರೆ, ಸಂಗೀತಾ ಇತರರಿದ್ದರು.