ಸುರಪುರ ತಹಸಿಲ್​ ಕಚೇರಿ ಎದುರು ಶುಕ್ರವಾರ ಮುಂಗಾರು ನಿರ್ವಹಣೆ ಮತ್ತು ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂ ತಹಸೀಲ್ದಾರ್​ಗೆ ಮನವಿ ಸಲ್ಲಿಸಿತು. ಸಂದ ರಾಜ್ಯ ಸಂಚಾಲಕ ಕೊಟ್ರೇಶ್​ ಚೌದ್ರಿ, ಜಿಲ್ಲಾಧ್ಯ ಯಲ್ಲಪ್ಪ ಎಚ್​.ನಾಯಕ ಮಲ್ಲಿಭಾವಿ, ಜಿಲ್ಲಾ ಗೌರವ ಅಧ್ಯ ಶಿವಶರಣಪ್ಪ ಹೈಯಾಳ ಇತರರಿದ್ದರು. 
ರಾಜ್ಯ

ಮುಂಗಾರು ಹಂಗಾಮು ಸುಗಮವಾಗಿ ನಿರ್ವಹಿಸಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಆಡಳಿತಕ್ಕೆ ರೈತ ಸಂಟನೆಗಳ ಒಕ್ಕೂಟ ಮನವಿ
ಸುರಪುರ: ಮುಂಬರುವ ಮುಂಗಾರು ಹಂಗಾಮ ರೈತರ ಪಾಲಿಗೆ ಅತ್ಯಂತ ಪ್ರಮುಖವಾಗಿದ್ದು, ಈ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ನಡೆಯಲು ತಾಲೂಕು ಆಡಳಿತ ತಣ ಎಚ್ಚೆತ್ತುಕೊಳ್ಳಬೇಕು ಎಂದು ರಾಜ್ಯ ರೈತ ಸಂಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂ ಆಗ್ರಹಿಸಿತು.
ನಗರದ ತಹಸಿಲ್​ ಕಚೇರಿ ಎದುರು ಶುಕ್ರವಾರ ಈ ಕುರಿತು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದ ರೈತ ಮುಖಂಡರು ಮಾತನಾಡಿ, ರೈತ ಸಂಪರ್ಕ ಕೇಂದ್ರಗಳ ಮೂಲಕ ಅಧಿಕ ಇಳುವರಿ ನೀಡುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಬೇಕು. ಮುಖ್ಯವಾಗಿ ಯೂರಿಯಾ ಮತ್ತು ಡಿಎಪಿ ಇತರೆ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಮತ್ತು ನಿಗದಿತ ಬೆಲೆಗೆ ಸಿಗುವಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.
ಮುಂಗಾರು ಆರಂಭವಾಗುತ್ತಿದ್ದಂತೆ ಕಾಲುವೆಗಳ ಕೊನೆಯ ಭಾಗದ ಜಮೀನುಗಳಿಗೂ ನೀರು ತಲುಪುವಂತೆ ಸರಿಯಾದ ಸಮಯಕ್ಕೆ ನೀರು ಹರಿಸಬೇಕು. ಇದರೊಂದಿಗೆ ಕೃಷಿ ಪಂಪ್​ಸೆಟ್​ಗಳಿಗೆ ದಿನಕ್ಕೆ ಕನಿಷ್ಠ 7ರಿಂದ 8ಗಂಟೆಗಳ ಕಾಲ ತ್ರೀ&ಫೇಸ್​ ವಿದ್ಯುತ್​ ಪೂರೈಸಲು ಇಂಧನ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಮುಂಗಾರು ಹಂಗಾಮಿಗೆ ಶೂನ್ಯ ಬಡ್ಡಿ ದರದಲ್ಲಿ ಹೊಸ ಸಾಲ ವಿತರಿಸಬೇಕು ಹಾಗೂ ಕಳೆದ ವರ್ಷ ನಷ್ಟ ಅನುಭವಿಸಿದ ರೈತರ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು. ಪ್ರಧಾನ ಮಂತ್ರಿ ಫಸಲ್​ ಬಿಮಾ ಯೋಜನೆಯಡಿ ನೋಂದಣಿ ಪ್ರತಿಕ್ರಿಯೆಯನ್ನು ಸರಳೀಕರಿಸಿ. ಬಾಕಿ ಇರುವ ಹಳೆಯ ಬೆಳೆ ವಿಮೆ ಹಣವನ್ನು ತಣ ಬಿಡುಗಡೆ ಮಾಡಿಸಬೇಕು ಎಂದು ತಿಳಿಸಿದರು. ಸಂದ ರಾಜ್ಯ ಸಂಚಾಲಕ ಕೊಟ್ರೇಶ್​ ಚೌದ್ರಿ, ಜಿಲ್ಲಾಧ್ಯ ಯಲ್ಲಪ್ಪ ಎಚ್​.ನಾಯಕ ಮಲ್ಲಿಭಾವಿ, ಜಿಲ್ಲಾ ಗೌರವ ಅಧ್ಯ ಶಿವಶರಣಪ್ಪ ಹೈಯಾಳ ಇತರರಿದ್ದರು.