ಗರ್ಭಿಣಿ ಪತ್ನಿಯೊಂದಿಗೆ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿ ಆಕ್ರೋಶ; ರಾಜ್ಯಪಾಲರ ವಾಹನಕ್ಕೆ ತಡೆ ಯತ್ನ  
ರಾಜ್ಯ

ಗರ್ಭಿಣಿ ಪತ್ನಿಯೊಂದಿಗೆ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿ ಆಕ್ರೋಶ; ರಾಜ್ಯಪಾಲರ ವಾಹನಕ್ಕೆ ತಡೆ ಯತ್ನ

ಪ್ರಮುಖ ಮುಖ್ಯಾಂಶಗಳು

  • ಗರ್ಭಿಣಿ ಪತ್ನಿಯೊಂದಿಗೆ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿ
  • ರಾಜ್ಯಪಾಲರ ವಾಹನ ತಡೆಯಲು ಯತ್ನಿಸಿ ಆಕ್ರೋಶ
  • ವಿಐಪಿ ಸಂಚಾರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆರೋಪ

ಬೆಂಗಳೂರು:ಮಂತ್ರಿ-ಮಹೋದಯರು,ವಿಐಪಿವಾಹನಗಳ ಕೆಂಪು ದೀಪವನ್ನುರದ್ದುಗೊಳಿಸಿ ಸಾಮಾನ್ಯ ಜನರಿಗೆತೊಂದರೆಯಾಗಬಾರದೆಂದು ಹಲವುನಿಯಮಗಳನ್ನು ಜಾರಿಗೆ ತರಲಾಗಿದೆ.ಆದರೆಏನೇ ನಿಯಮಗಳನ್ನು ತಂದರೂ ವಿವಿಐಪಿಗಳಸಂಚಾರದ ವೇಳೆ ಸಾಮಾನ್ಯ ಜನರುತೊಂದರೆ ಅನುಭವಿಸುವುದು ಮಾತ್ರತಪ್ಪಿಲ್ಲ.ಭಾನುವಾರನಗರದ ಹಳೇ ವಿಮಾನ ನಿಲ್ದಾಣರಸ್ತೆಯಲ್ಲಿ ನಡೆದ ಘಟನೆಯೊಂದುಸಾಮಾಜಿಕ ಮಾಧ್ಯಮದಲ್ಲಿ ಭಾರಿಸದ್ದು ಮಾಡುತ್ತಿದೆ.

ಭಾನುವಾರಸಂಜೆ ರಾಜ್ಯಪಾಲರ ವಾಹನ ಸಂಚಾರಕ್ಕಾಗಿಕೆಲಕಾಲ ಸಾರ್ವಜನಿಕ ವಾಹನ ಸಂಚಾರಕ್ಕೆನಿರ್ಬಂಧ ಹೇರಲಾಗಿತ್ತು.ಇದರಪರಿಣಾಮ ಓಲ್ಡ್ ಏರ್‌ಪೋರ್ಟ್ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆಸಂಚಾರಸಿಕ್ಕು ಉಂಟಾಗಿತ್ತು.ಈ ವೇಳೆಗರ್ಭಿಣಿ ಪತ್ನಿಯನ್ನು ಚಿಕಿತ್ಸೆಗಾಗಿಕರೆದುಕೊಂಡು ಹೋಗುತ್ತಿದ್ದವ್ಯಕ್ತಿ ಬಹಳ ಹೊತ್ತು ಟ್ರಾಫಿಕ್‌ನಲ್ಲಿಸಿಲುಕಿಕೊಂಡು ತೀವ್ರ ಆತಂಕ ಮತ್ತುಆಕ್ರೋಶ ವ್ಯಕ್ತಪಡಿಸಿದರು.

ವಿಐಪಿಸಂಚಾರಕ್ಕಾಗಿ ಸಾಮಾನ್ಯ ಜನರಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವ್ಯವಸ್ಥೆಯ ವಿರುದ್ಧ ಯುವಕ ತೀವ್ರಅಸಮಾಧಾನ ಹೊರ ಹಾಕಿದ್ದಾನೆ.ಮಾನವೀಯತೆದೃಷ್ಟಿಯಿಂದ ಪೊಲೀಸರು ತುರ್ತುಸಂದರ್ಭವನ್ನು ಪರಿಗಣಿಸಿ ಗರ್ಭಿಣಿಮಹಿಳೆಯ ಚಿಕಿತ್ಸೆಗೆ ಅನುವುಮಾಡಿಕೊಡಬೇಕಾದ ಅಗತ್ಯವಿತ್ತುಎಂಬುದು ನೆಟ್ಟಿಗರ ಅಭಿಪ್ರಾಯ.ಯುವಕತನ್ನ ಪರಿಸ್ಥಿತಿಯನ್ನು ಪೊಲೀಸರಿಗೆಹೇಳಲು ಮಾಡಿದ ಪ್ರಯತ್ನ ಲಪ್ರದವಾಗದಿದ್ದಾಗರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆನಡೆಸಲು ಮುಂದಾಗಿದ್ದಾನೆ.ಆಗಗಲಿಬಿಲಿಗೊಂಡ ಸಂಚಾರ ಪೊಲೀಸರುಯುವಕನಿಗೆ ಎಚ್ಚರಿಕೆ ನೀಡುವ,ಒಂದುಹಂತದಲ್ಲಿ ವಿನಂತಿ ಮಾಡುವಂತೆಆತನ ಮನವೊಲಿಸುತ್ತಿರುವ ವೀಡಿಯೋಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.ರಾಜ್ಯಪಾಲರು,ರಾಷ್ಟ್ರಪತಿಗಳು,ಪ್ರಧಾನಮಂತ್ರಿಕಚೇರಿಯೊಂದಿಗೆ ಇದನ್ನು ಟ್ಯಾಗ್ಮಾಡಲಾಗಿದೆ.

ಪೊಲೀಸರಜೊತೆಗೆ ವಾಗ್ವಾಧಕ್ಕಿಳಿದಿರುವಯುವಕ ಪತ್ನಿಯ ಆರೋಗ್ಯದ ಬಗ್ಗೆಕಳವಳಗೊಂಡು, ವಿಐಪಿಗಳಿಗಾಗಿಸಾಮಾನ್ಯ ಜನರು ಯಾಕೆ ನರಳಬೇಕು?ತುರ್ತುಪರಿಸ್ಥಿತಿ ಎದುರಾದರೆ ಯಾರುಹೊಣೆ ಎಂದು ಪ್ರಶ್ನಿಸಿದ್ದಾನೆ.ಪರಿಸ್ಥಿತಿಯನ್ನುಅರಿತ ಇತರ ವಾಹನ ಸವಾರರು,ಸಾರ್ವಜನಿಕರುಯುವಕನ ಪರಿಸ್ಥಿತಿ ಕಂಡು ಸಹಾನುಭೂತಿವ್ಯಕ್ತಪಡಿಸಿದ್ದು,ಆತನಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಸಾರ್ವಜನಿಕವಲಯದಲ್ಲಿ ತೀವ್ರ ಆಕ್ರೋಶ

ಘಟನೆಯವಿಡಿಯೊಗಳು ಮತ್ತು ಚಿತ್ರಗಳುಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗುತ್ತಿದ್ದಂತೆಯೇ ವಿಐಪಿಸಂಸ್ಕೃತಿ ವಿರುದ್ಧ ಸಾರ್ವಜನಿಕವಲಯದಲ್ಲಿ ತೀವ್ರ ಆಕ್ರೋಶವ್ಯಕ್ತವಾಗಿದೆ.ಗರ್ಭಿಣಿಯರು,ರೋಗಿಗಳು,ವೃದ್ಧರುಹಾಗೂ ತುರ್ತು ಅಗತ್ಯದೊಂದಿಗೆಪ್ರಯಾಣಿಸುವ ಜನರು ಇಂತಹ ಸಂದರ್ಭಗಳಲ್ಲಿಎದುರಿಸುವ ಸಂಕಷ್ಟದ ಬಗ್ಗೆ ಹಲವರುಪ್ರಶ್ನೆ ಎತ್ತಿದ್ದಾರೆ.

ಒಬ್ಬವಿಐಪಿಯ ಸಂಚಾರಕ್ಕಾಗಿ ಸಾವಿರಾರುಜನರನ್ನು ಗಂಟೆಗಟ್ಟಲೆ ರಸ್ತೆಯಲ್ಲೇನಿಲ್ಲಿಸುವುದು ಎಷ್ಟು ನ್ಯಾಯ?ತುರ್ತುವೈದ್ಯಕೀಯ ಚಿಕಿತ್ಸೆಗೆತೆರಳುತ್ತಿರುವವರ ಜೀವಕ್ಕೆ ಅಪಾಯಉಂಟಾದರೆ ಯಾರು ಜವಾಬ್ದಾರರು?ಜನಸಾಮಾನ್ಯರಜೀವಕ್ಕಿಂತ ವಿಐಪಿ ಬೆಂಗಾವಲುಮುಖ್ಯವೇ?ಎಂಬಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿಕೇಳಿಬರುತ್ತಿವೆ.ಸಾರ್ವಜನಿಕರಿಗೆಆಗುವ ತೊಂದರೆ ತಪ್ಪಿಸಲು ಸರ್ಕಾರಸೂಕ್ತ ಕ್ರಮ ಕೈಗೊಳ್ಳಬೇಕೆಂದುನಾಗರಿಕರು ಆಗ್ರಹಿಸಿದ್ದಾರೆ.