Birthday Celebration (ಚಿತ್ರ Instagram) 
ರಾಜ್ಯ

ಕೆಲಸದಾಕೆಯ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿದ ಬೆಂಗಳೂರು ಯುವಕ; ವಿಡಿಯೋ ವೈರಲ್​.. Birthday Celebration

ಬೆಂಗಳೂರು: ಇಂದಿನ ತಂತ್ರಜ್ಞಾನ ಜೀವನದಲ್ಲಿ ಮನುಷ್ಯತ್ವ ಮರೆಯಾಗುತ್ತಿದೆ ಎಂಬ ಮಾತಿನ ನಡುವೆಯೇ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಒಂದು ಪುಟ್ಟ ವಿಡಿಯೋ ಕೋಟ್ಯಂತರ ಜನರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ತನ್ನ ಮನೆಯಲ್ಲಿ ಕೆಲಸ ಮಾಡುವ ಸಹಾಯಕಿಯೊಬ್ಬರಿಗೆ (Birthday Celebration) ಹುಟ್ಟುಹಬ್ಬದ ಸಪ್ರೈಸ್​ ನೀಡುವ ಮೂಲಕ ಕೃತಾರ್ಥ ಎಂಬುವವರು ಹಂಚಿಕೊಂಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೃತಾರ್ಥ ಹಂಚಿಕೊಂಡಿರುವ ಕ್ಲಿಪ್​ನಲ್ಲೇನಿದೆ?

ಕೃತಾರ್ಥ ವಿವರಿಸುವಂತೆ ಒಂದು ದಿನ ಸಹಾಯಕಿ ಜ್ಯೋತಿ ಅಡುಗೆಮನೆಯಲ್ಲಿ ನಿಂತು ಅಳುತ್ತಿರುವುದನ್ನು ಗಮನಿಸಿದರು. ಈ ವೇಳೆ ಆಕೆಗೆ ಏನಾಯಿತು ಎಂದು ಕೇಳಿದಾಗ ಇಂದು ನನ್ನ ಜನ್ಮದಿನ ನನ್ನ ತಾಯಿ ಇದ್ದಿದ್ದರೆ, ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು ಎಂದು ಕಣ್ಣೀರು ಹಾಕಿದರು.
ಜ್ಯೋತಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದು ಇನ್ನಷ್ಟು ಭಾವುಕವಾಯಿತು ಎಂದು ಅವರು ವಿವರಿಸಿದರು.

ಸಣ್ಣ ಆಚರಣೆ, ದೊಡ್ಡ ಭಾವನೆ!

ಜ್ಯೋತಿಯ ಹಳೆಯ ಕಷ್ಟಗಳನ್ನು ನಾವು ಅಳಿಸಿಹಾಕಲು ಸಾಧ್ಯವಿಲ್ಲದಿದ್ದರೂ, ವರ್ತಮಾನದಲ್ಲಿ ಅವರಿಗೆ ಪ್ರೀತಿ ಮತ್ತು ಗೌರವ ನೀಡುವ ಮೂಲಕ ಅವರ ಭವಿಷ್ಯದ ನೆನಪುಗಳನ್ನು ಸುಂದರಗೊಳಿಸಬಹುದು ಎನ್ನುವುದು ಅವರ ಆಸೆಯಾಗಿತ್ತು. ಹಾಗಾಗಿ ಕೃತಾರ್ಥ ಮತ್ತು ಅವನ ಸ್ನೇಹಿತರು ಒಟ್ಟಿಗೆ ಸೇರಿ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದರು.

ವಿಡಿಯೋದಲ್ಲೇನಿದೆ?

ಕೃಥಾರ್ತ್ ಮತ್ತು ಅವರ ಸ್ನೇಹಿತರ ಗುಂಪು ಸೇರಿಕೊಂಡು ಜ್ಯೋತಿ ಅವರಿಂದ ಕೇಕ್​ ಕತ್ತರಿಸಿದರು. ಈ ವೇಳೆ ಅವರ ಮುಖದಲ್ಲಿದ್ದ ಸಂತೋಷ ಎಲ್ಲಾ ಹಳೆಯ ದುಃಖವನ್ನು ಮರೆಸುವಂತೆ ಮಾಡಿತು. ಆದಾಗ್ಯೂ, ಆಚರಣೆಯ ಸಮಯದಲ್ಲಿ ಆಕೆ 500 ರೂಗಳನ್ನು ಪಾರ್ಟಿ ಮಾಡಲು ನೀಡಲು ಬಂದಿದ್ದರು. ಆದರೆ, ಅದನ್ನು ನಿರಾಕರಿಸಿರುವುದಾಗಿ ಕೃತಾರ್ಥ್ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಕೃತಾರ್ಥ ಅವರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಒಬ್ಬ ಬಳಕೆದಾರರು ನಮ್ಮ ಸುತ್ತಲಿರುವ ಸಣ್ಣ ಪುಟ್ಟ ವ್ಯಕ್ತಿಗಳ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಹಬ್ಬ ಎಂದು ಕಾಮೆಂಟ್​ ಮಾಡಿದರೆ, ಇನ್ನೊಬ್ಬ ಬಳಕೆದಾರರು ಶ್ರೀಮಂತಿಕೆ ಇರುವುದು ಹಣದಲ್ಲಲ್ಲ, ಗುಣದಲ್ಲಿ ಎಂದು ಬರೆದಿದ್ದಾರೆ (ಏಜೆನ್ಸೀಸ್​).