Man arrested for threatening life
ಬೆಳಗಾವಿ: ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೋಕ್ಸೋ ಕಾಯ್ದೆ ಅಡಿಯ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಉದ್ಯಮಬಾಗ ಪೊಲೀಸರು ಪೀರನವಾಡಿ ಸಿದ್ದೇಶ್ವರ ಗಲ್ಲಿಯ ಪಾತ್ರೆ ವ್ಯಾಪಾರಿ ರೋಹಿತ ಗಣಾಚಾರಿ (20)ಯನ್ನು ಬಂಧಿಸಿದ್ದಾರೆ. ಈತ ರವಿ ವಾಮೋಟೆ ಜತೆ ಸೇರಿ, ತಮ್ಮ ಸಂಬಂಧಿಯಾದ ಆರೋಪಿ ವಿರುದ್ಧ ಸಾಕ್ಷಿ ಹೇಳದಂತೆ ಮಜಗಾವಿ ವ್ಯಕ್ತಿಗೆ ಬೆದರಿಕೆ ಹಾಕಿದ್ದಲ್ಲದೆ, ಇವರ ಅಣ್ಣನಿಗೆ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿತ್ತು.