- ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು
- ಆರೋಪಿಯಿಂದ ತಲಘಟ್ಟಪುರ ಠಾಣೆಯಲ್ಲಿ ಪ್ರತಿ ದೂರು
ಸ್ಯಾಂಡಲ್‌ವುಡ್ ನಟಿಯೊಬ್ಬರ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಲಘಟ್ಟಪುರ ನಿವಾಸಿ ರಾಘವೇಂದ್ರ (35) ಬಂಧಿತ. ಈತನ ವಿರುದ್ಧ ನಟಿಯ ಸಹೋದರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆದಿದೆ.
ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಸಂತ್ರಸ್ತೆಗೆ ರಾಘವೇಂದ್ರ ಪರಿಚಯವಾಗಿರುತ್ತಾನೆ. ಅಲ್ಲಿ ಇಬ್ಬರ ನಡುವೆ ಸ್ನೇಹ ಬೆಳದಿರುತ್ತದೆ. ಕೆಲ ದಿನಗಳ ಬಳಿಕ ಇಬ್ಬರ ನಡುವೆ ಪ್ರೇಮ ಉಂಟಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಇಚ್ಛೆಯ ವಿರುದ್ಧವಾಗಿ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ದೂರು ಸಲ್ಲಿಸಿದ್ದಾರೆ.
ನಾನು ಹೇಳಿದಂಗೆ ಕೇಳಬೇಕು: ಆರೋಪಿಗೆ ಮದುವೆಯಾಗಿ ವಿಚ್ಛೇದನ ಆಗಿರುತ್ತದೆ. ಈತನಿಗೆ ಮಗುವೂ ಸಹ ಇದೆ ಎಂಬ ವಿಚಾರ ಮಹಿಳೆಗೆ ತಿಳಿದಿರುತ್ತದೆ. ಆಗ ಆತನಿಂದ ದೂರ ಆಗಲು ಪ್ರಯತ್ನಿಸಿದಾಗ ‘ನಾನು ಹೇಳಿದಂತೆ ಕೇಳಿಕೊಂಡಿರಬೇಕು’ ಇಲ್ಲದಿದ್ದರೇ ಖಾಸಗಿ ೆಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಆರೋಪಿಯ ಬೆದರಿಕೆಗೆ ಹೆದರಿದ್ದ ಯುವತಿ ತನ್ನ ಸಹೋದರಿ ನಟಿ ಸಹಾಯದಿಂದ ಠಾಣೆ ಮೆಟ್ಟಿಲೇರಿ ದೂರು ಸಲ್ಲಿಸಿದ್ದಾಳೆ. ಆಗ ಪೊಲೀಸರು ಆರೋಪಿಯನ್ನು ಕರೆಸಿ Photo's ಅಳಿಸಿ (ಡಿಲಿಟ್) ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಹಾಕಿ ಕರೆಸಿಕೊಂಡು ಮತ್ತೇ ಅತ್ಯಾಚಾರ..!
ಕೆಲ ದಿನಗಳ ನಂತರ ಕೈ ಕೊಯ್ದುಕೊಂಡ ಹಾಗೂ ಇಬ್ಬರ ಖಾಸಗಿ ಫೋಟೋ ಯುವತಿಗೆ ಕಳಿಸಿದ್ದ ರಾಘವೆಂದ್ರ. ತಾನು ಹೇಳಿದ ಜಾಗಕ್ಕೆ ಬರಬೇಕೆಂದು ತಾಕೀತು ಮಾಡಿದ್ದ. ಇದರಂತೆ ಯುವತಿ ಆತ ಸೂಚಿಸಿದ್ದ ಜಾಗಕ್ಕೆ ಹೋಗಿದ್ದಳು. ಅಲ್ಲಿ ಹೋದಾಗ ಆತನ ಕೈಗೆ ಏನು ಆಗಿರಲಿಲ್ಲ. ಕೈಗೆ ಟೊಮ್ಯಾಟೋ ಸಾಸ್ ಹಾಕಿಕೊಂಡಿದ್ದ ಎಂಬುದು ತಿಳಿದಿದೆ. ಅಲ್ಲಿಂದ ಯುವತಿ ವಾಪಸ್ಸಾಗಲು ಯತ್ನಿಸಿದಾಗ ಖಾಸಗಿ ೆಟೋ ತೋರಿಸಿ ಬೆದರಿಕೆ ಹಾಕಿ ಮತ್ತೇ ಅತ್ಯಾಚಾರ ಮಾಡಿದ್ದಾಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆ ಹಾಗೂ ಆಕೆಯ ತಾಯಿ ೆನ್ ಕರೆ ಮಾಡಿ ನನಗೆ ಹಾಗೂ ನನ್ನ ತಾಯಿಗೆ ಕಳೆದ ಆರು ತಿಂಗಳಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿ ತಲಘಟ್ಟಪುರ ಠಾಣೆಗೆ ದೂರು ಸಲ್ಲಿಸಿದ್ದಾನೆ. ದೂರು ಸ್ವೀಕರಿಸಿದ ಪೊಲೀಸರು ಎನ್‌ಸಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೇಡು ತೀರಿಸಿಕೊಳ್ಳಲು ರೇಪ್ ಕೇಸ್..!
ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವು. ಈ ನಡುವೆ ಯುವತಿ ಬೇರೆ ಯುವಕರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಸರಿಯಾಗುವಂತೆ ಆಕೆಗೆ ಬುದ್ಧಿ ಹೇಳುತ್ತಿದ್ದೆ. ಈ ವಿಚಾರವಾಗಿ ಆಕೆಯ ತಾಯಿಯೊಂದಿಗೆ ಮಾತನಾಡಿದಾಗ ಅವರ ಮನೆಯಲ್ಲಿ ಜಗಳ ಆಗಿರುತ್ತದೆ. ಹಾಗಾಗಿ ನನ್ನ ಸಂಪೂರ್ಣ ದೂರ ಇಡಲು ಹಾಗೂ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ರೇಪ್ ಕೇಸ್ ಹಾಕಿದ್ದಾರೆ ಎಂದು ಆರೋಪಿ ರಾಘವೇಂದ್ರ ಅಜ್ಞಾತ ಸ್ಥಳದಲ್ಲಿ ಕೂತು ಮಾತನಾಡಿದ ವಿಡಿಯೊದಿಂದ ತಿಳಿದು ಬಂದಿದೆ.