ದೊಮ್ಮನಗದ್ದೆಯ ಮನೊಂದರಲ್ಲಿ ಒಣಗಾಂಜಾವನ್ನು ಸಂಗ್ರಹಿಸಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದರು. ದಯಾನಂದ, ಸಿದ್ದರಾಜು, ಶಾಂತರಾಜು, ಮಂಜು ಇದ್ದರು.
- ದೊಮ್ಮನಗದ್ದೆ ಗ್ರಾಮದ ಮನೆ
- ದಾಳಿ ನಡೆಸಿದ ಅಬಕಾರಿ ಪೊಲೀಸರು
ಹನೂರು: ತಾಲೂಕಿನ ದೊಮ್ಮನಗದ್ದೆ ಗ್ರಾಮದ ಮನೆಯೊಂದರ ಮೇಲೆ ಮಂಗಳವಾರ ದಾಳಿ ನಡೆಸಿದ ಅಬಕಾರಿ ಪೊಲೀಸರು ಗಾಂಜಾ ಸಂಗ್ರಹಿಸಿಟ್ಟಿದ್ದವನನ್ನು ಬಂಧಿಸಿದ್ದಾರೆ.
ಗ್ರಾಮದ ಸಿದ್ದುನಾಯ್ಕ ಬಂಧಿತ. ಈತ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹನೂರಿನಲ್ಲಿ ಗಸ್ತು ನಡೆಸುತ್ತಿದ್ದಾಗ ದೊರೆತ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ದಯಾನಂದ ಸಿಬ್ಬಂದಿಯೊಂದಿಗೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. 465 ಗ್ರಾಂ ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಸಬ್‌ಇನ್‌ಸ್ಪೆಕ್ಟರ್ ಸಿದ್ದರಾಜು, ಸಿಬ್ಬಂದಿ ಜಯಪ್ರಕಾಶ್, ಶಾಂತರಾಜು ಹಾಗೂ ಮಂಜು ಭಾಗವಹಿಸಿದ್ದರು.