ಮಕ್ಕಳಗೇರಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಗಣ್ಯರು ಪೂಜೆ ಸಲ್ಲಿಸಿದರು. ಬಸವರಾಜ ದಂಡಿನ, ಎನ್.ಎನ್.ಹಾಸಿಲಕರ, ಮಹಾಂತೇಶ ಗಸ್ತಿ ಇತರರಿದ್ದರು.
ಮಮದಾಪುರ: ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಸಾ ಎಂದು ಪಿಡಿಒ ಎನ್.ಎನ್.ಹಾಸಿಲಕರ ಹೇಳಿದರು.
ಸಮೀಪದ ಮಕ್ಕಳಗೇರಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಅಂಬೇಡ್ಕರ್ ಬಡವರ ಹಾಗೂ ಹಿಂದುಳಿದವರ ಉನ್ನತಿಗಾಗಿ ಜೀವನ ಮುಡಿಪಾಗಿಟ್ಟ ಧೀಮಂತ. ಸಮಾನತೆ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ ಎಂದರು.
ಎಸ್ಡಿಎಂಸಿ ಅಧ್ಯ ಬಸವರಾಜ ದಂಡಿನ, ಮಹಾಂತೇಶ ಗಸ್ತಿ, ಯಲ್ಲಪ್ಪ ಹರಿಜನ, ಬಾಳೇಶ ನಾಯಕ, ಬಸು ಹರಿಜನ, ಲಕ್ಕಪ್ಪ ದುರದುಂಡಿ, ಯಲ್ಲಪ್ಪ ಹೊಸಮನಿ, ಇಕ್ಬಾಲ್ ಶಿವಾಪುರ ಇತರರಿದ್ದರು.