ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ 
ರಾಜ್ಯ

ಉಳಿದವರು ಏನು ಕಸ ಗುಡಿಸೋಕೆ ಬಂದಿದ್ದಾರಾ? ಕಾಂಗ್ರೆಸ್​ ಕಾರ್ಯಕರ್ತರಿಗೆ ಮಲ್ಲಿಕಾರ್ಜುನ್​ ಖರ್ಗೆ ಕ್ಲಾಸ್​

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
  • ಡಿಕೆ, ಡಿಕೆ ಎಂದು ಕೂಗಿದ ಕಾರ್ಯಕರ್ತರಿಗೆ ಮಲ್ಲಿಕಾರ್ಜುನ್ ಖರ್ಗೆ ಕ್ಲಾಸ್​
ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ನೂತನ ಕೆಪಿಸಿಸಿ ಅಧ್ಯಕ್ಷ ಬಿಕೆ. ಹರಿಪ್ರಸಾದ್​ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ತಮ್ಮದೇ ಕಾರ್ಯಕರ್ತರ ವಿರುದ್ಧ ಗುಡುಗಿದರು.
ತಮ್ಮ ಭಾಷಣದ ವೇಳೆ ಡಿಕೆ, ಡಿಕೆ ಎಂದು ಕೂಗುತ್ತಿದ್ದ ಕಾರ್ಯಕರ್ತರ ನಡೆಗೆ ಸಿಡಿದೆದ್ದ ಖರ್ಗೆ, ಇದು ಕಾಂಗ್ರೆಸ್ ಪಕ್ಷದ ಮೀಟಿಂಗ್ ವ್ಯಕ್ತಿಯ ಸಭೆ ಅಲ್ಲ. ಒಬ್ಬೊಬ್ಬರ ಹೆಸರು ಕೂಗುತ್ತಿದ್ರೆ, ದೇಶ ಕೈಗೆ ಬರಲ್ಲ. ಪಕ್ಷಕ್ಕೆ ಶಿಸ್ತು ಮುಖ್ಯವೇ ಹೊರತು ಇಲ್ಲಿ ಯಾರೇ ಎಷ್ಟೇ ದೊಡ್ಡವರಿದ್ರೂ ಅಷ್ಟೇ. ನೀವೆಲ್ಲ ಯೂಸ್ ಲೆಸ್ ಥರ ಆಡಬೇಡಿ. ಕಾಂಗ್ರೆಸ್​ನಿಂದ ನಾಯಕರಾಗಿದ್ದಾರೆ ವಿನಃ ವ್ಯಕ್ತಿಯಿಂದಲ್ಲ. ಅವರ ಕೊಡುಗೆ ಕಡಿಮೆ ಇದ್ದರೂ ಪಕ್ಷ ಎಲ್ಲವನ್ನೂ ಕೊಡುತ್ತದೆ ಎಂದರು.
ಸುಖಾಸುಮ್ಮನೆ ಈ ರೀತಿ ಕೂಗಾಡೋದು ಸರಿಯಲ್ಲ. ಉಳಿದವರು ಏನು ಕಸ ಗುಡಿಸೋಕೆ ಬಂದಿದ್ದಾರಾ? ಯಾರು ಹೀಗೆ ಚೀರಾಡುತ್ತಿರೋ, ಅವರ ವಿಡಿಯೋ ಪೂಟೇಜ್ ತೆಗೆದು ನೋಡುತ್ತೇನೆ. ಅಂತಹವರ ವಿರುದ್ಧ ಡಿಸಿಪ್ಲಿನರಿ ಆ್ಯಕ್ಷನ್ ತೆಗೆದುಕೊಳ್ಳುವೆ. ಇದು ಪಕ್ಷದ ಕಾರ್ಯಕ್ರಮ. ಎಲ್ಲರೂ ಪಕ್ಷ ಕಟ್ಟಬೇಕೇ ಹೊರತು ಘೋಷಣೆ ಕೂಗೋದ್ರಿಂದ ಏನೂ ಆಗೋದಿಲ್ಲ ಎಂದು ಹೇಳಿದರು.
ಶಿವಕುಮಾರ್ ಪಕ್ಷವನ್ನು ಒಳ್ಳೇ ರೀತಿ ನಿಭಾಯಿಸಿದ್ದಾರೆ. ಮುಂದೆ ಹರಿಪ್ರಸಾದ್ ಕೂಡ ಅದೇ ರೀತಿ ಪಕ್ಷ ಕಟ್ಟುತ್ತಾರೆ ಅಂತ ಭಾವಿಸಿದ್ದೇನೆ. ನಿಮ್ಮ ನಡುವೆ ವ್ಯತ್ಯಾಸ ಬಂದರೆ, ನೀವೇ ಕೂತು ಬಗೆಹರಿಸಿಕೊಳ್ಳಿ. ಮಾತುಗಳು ಮಾದ್ಯಮಗಳ ಮುಂದೆ ಬೇಡ. ಅಲ್ಲಿ ಆಡುವ ಮಾತು ಪಕ್ಷದ ಎಲ್ಲ ವಲಯದ ಮೇಲೆ ಪರಿಣಾಮ ಬೀರತ್ತದೆ ಎಂಬುದು ನಿಮಗೆ ನೆನಪಿರಲಿ. ನಿಷ್ಟಾವಂತರಿಗೆ ಅಗತ್ಯ ಹುದ್ದೆ ಗೌರವ ಕೊಡುವುದು ಸರಿ. ಹೋರಾಟಕ್ಕೆ ಕಾರ್ಯಕರ್ತರೇ ನಿಮ್ಮ ಜೊತೆ ಬರುವುದು. ಇದನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಿರಿ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಸಿಎಂ ಡಿಕೆಶಿ ಹಾಗೂ ನೂತನ ಕೆಪಿಸಿಸಿ ಅದ್ಯಕ್ಷರಿಗೆ ಖರ್ಗೆ ಕಿವಿಮಾತು ನೀಡಿದರು.