ಕಲಬುರಗಿ : ತೆಲಂಗಾಣ ಸಿಎಂ ರೇವಂತರೆಡ್ಡಿ ಅಮೆರಿಕಾ ಪ್ರವಾಸಕ್ಕೆ ಕೇಂದ್ರ ನಿರ್ಬಂಧ ಹೇರುವ ಮೂಲಕ ಬಿಜೆಪಿ ದೇಶದ ಪ್ರಗತಿಗೆ ಬರಬಹುದಾದಂತ ಬಂಡವಾಳಕ್ಕೆ ಕೊಕ್ಕೆ ಹಾಕಿದೆ ಎಂದು ಎಐಸಿಸಿ ಅಧ್ಯಕ್ಷರಾಗಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.ನಗರದಲ್ಲಿ ಇಂದು ಪತ್ರಕರ್ತರ ಜತೆಗೆ ಮಾತನಾಡಿ, ಬಿಜೆಪಿ ಸರ್ಕಾರ ತಮಗೆ ಬೇಕಾದ ವ್ಯಕ್ತಿಗಳನ್ನು ಮಾತ್ರ ಅಮೆರಿಕಕ್ಕೆ ಹೋಗಲು ಬಿಡುತ್ತೆ ಎಂದು ಹರಿಹಾಯ್ದರು.
ಈ ರೀತಿಯಾಗಿ ಅನುಮತಿ ನೀಡದೇ ಇರೋದು ಅನ್ಯಾಯ. ಅಲ್ಲಿಂದ ಬಂಡವಾಳ ಬಂದ್ರೆ ದೇಶಕ್ಕೆ ಒಳ್ಳೆಯದಾಗುತ್ತಿತ್ತು. ಅಭಿವೃದ್ಧಿ ವಿರೋಧಿ ನೀತಿ.ಈ ರೀತಿಯಾದ ವರ್ತನೆಯನ್ನು ಖಂಡಿಸುತ್ತೆನೆ ಎಂದರು.ಅಮೆರಿಕಾದಲ್ಲಿ (America ) ಆಂಧ್ರದ ಬಹಳಷ್ಟು ಜನ ಎನ್ ಆರ್ ಐಗಳು ಇದ್ದಾರೆ ಅವರನ್ನು ಭೇಟಿ ಬಂಡವಾಳ ತರುವ ಉದ್ದೇಶ ಅವರದಾಗಿತ್ತು. ಇಂತಹ ಕೆಲಸಕ್ಕೆ ಮೋದಿ ಕಲ್ಲು ಹಾಕಿದ್ದಾರೆ ಎಂದು ಟೀಕಿಸಿದರು.
ವಂದೇ ಮಾತರಂ ಗೀತೆ ಬಗ್ಗೆ ವಿವಾದ ಮಾಡುವ ಬದಲಿಗೆ ಮೊದಲು, ಎಲ್ಲರೂ ಇತಿಹಾಸ ಓದಬೇಕು.ಸ್ವಾತಂತ್ರ ಬರೋದಕ್ಕೂ ಮುಂಚೆ ಎರಡೂ ಪ್ಯಾರಾಗಳಿಗೆ ಸಿಮಿತವಾಗಿ ನಿರ್ಧಾರ ಮಾಡಿದಂತೆ ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ.ಇಲ್ಲಿಯವರೆಗೂ ನಮ್ಮ ಸೇವಾದಳ ಅದನ್ನೇ ಹಾಡಲಾಗುತ್ತದೆ. ಅಲ್ಲದೇ ಜನಗಣ ಸಹ ಒಂದು ಪ್ಯಾರಾ ಹಾಡಲಾಗುತ್ತದೆ.ರವೀಂದ್ರನಾಥ ಟ್ಯಾಗೂರ್ ಹೇಳಿದ್ದು ಒಂದೇ ಪ್ಯಾರಾ. ನಾವು ಅದನ್ನೆ ಹಾಡಿದ್ರೆ ದೇಶದ್ರೋಹಿಗಳಾ..? ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದರು.ಬಿಜೆಪಿಯವರು ಹೇಳುವುದು ನೋಡಿದರೆ ಟ್ಯಾಗೋರ್,ಸರ್ದಾರ್ ಪಟೇಲ್, ನೆಹರು, ಸುಭಾಷ್ ಚಂದ್ರ ಭೋಸ್, ಆಜಾದ್ ಮೌಲಾನಾ ಅಬ್ದುಲ್ ಕಲಾಂ ಮೊದಲಾದವರೆಲ್ಲ ದೇಶದ್ರೋಹಿನಾ ಎಂದು ಮರು ಪ್ರಶ್ನೆ ಹಾಕಿದರು.ಇಷ್ಟು ದಿನ ಬಿಜೆಪಿಯವರು ಅದನ್ನೆ ಹಾಡಿದ್ರಿಲ್ಲಾ ನೀವು ದೇಶದ್ರೋಹಿನಾ..? ಎಂದು ತಿವಿದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ 12 ವರ್ಷ ಅಧಿಕಾರ ಮಾಡಿದ್ರಲ್ಲ ಹಿಂದೆ ಅವಾಗ್ಯಾಕೆ ನೆನಪು ಬರಲಿಲ್ಲ?
ಅಂದರೆ ಅಲ್ಲಿಯವರೆಗೂ ನೀವು (BJP) ದೇಶದ್ರೋಹಿನಾ...? ಎಂದರು.
ಗೃಹ ಸಚಿವ ಅಮಿತ್ ಶಾ ಇನ್ನು ಹುಟ್ಟೆ ಇರಲಿಲ್ಲ. ಸ್ವಾತಂತ್ರ್ಯ ತಂದವರನ್ನ ನೀವು ಅವಮಾನ ಮಾಡ್ತಿರಾ..? ಅಮಿತ್ ಶಾ ವಯಸ್ಸಿನ್ನು ಕೇವಲ 60-65 ಇರಬೇಕು. ಈ ರೀತಿಯಾದ ಚಿಲ್ಲರೆ ಕೆಲಸ ಬಿಡಿ ಎಂದು ಸಲಹೆ ನೀಡಿದರು.ದೇಶದ ಜನತೆಗೆ ಉಧ್ಯೋಗ, ಶಿಕ್ಷಣದ ನೀಡೋ ಬಗ್ಗೆ ಯೋಚನೆ ಮಾಡಿ. ಮನ್ರೇಗಾ ರೀತಿಯಾದ ಯೋಜನೆಗಳನ್ನ ನೀಡಿ ಎನ್ನುವ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ದೆಹಲಿಯ ಪೊಲೀಸ್ ಠಾಣೆ ಮುಂದೆ ಸಂಸದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾಗಾಂಧಿ ಕಡೆಗೆ ನೋಡಿದರು.
ದೆಹಲಿಯ ಸಂಸತ್ ಮಾರ್ಗ ಠಾಣೆಗೆ ದೂರು ಕೊಟ್ಟ ತಕ್ಷಣವೇ ಎಫ್ ಐ ಆರ್ ದಾಖಲಿಸಿದ್ರೆ ಪ್ರತಿಭಟನೆ ಮಾಡ್ತಿರಲಿಲ್ಲ. ಎಫ್ ಐ ಆರ್ ದಾಖಲಿಸಿಲ್ಲ ಅಂತ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದರು ಎಂದರು.