Malleshwaraswamy fair from today 
ರಾಜ್ಯ

ಇಂದಿನಿಂದ ಮಲ್ಲೇಶ್ವರಸ್ವಾಮಿ ಜಾತ್ರೆ

ತುಮಕೂರು ಡೆಸ್ಕ್
ಎಂ.ಎನ್​.ಕೋಟೆ: ಗುಬ್ಬಿ ತಾಲೂಕಿನ ಉನಗನಾಲ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲೇಶ್ವರಸ್ವಾಮಿ ಹಾಗೂ ಶ್ರೀ ಕೊಲ್ಲಾಪುರದಮ್ಮ ದೇವಿಯ ಜಾತ್ರಾ ಮಹೋತ್ಸವ ಏ.20ರಿಂದ ಏ.21ರ ವರೆಗೆ ನಡೆಯಲಿದೆ ಎಂದು ಗ್ರಾಪಂ ಸದಸ್ಯ ಭೂಮುರಾಜು ತಿಳಿಸಿದ್ದಾರೆ.
ಗುಬ್ಬಿ ತಾಲೂಕಿನ ಉನಗನಾಲದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಏ.20ರಂದು ಬೆಳಗ್ಗೆ ಮಲ್ಲೇಶ್ವರಸ್ವಾಮಿಗೆ ಅಭಿಷೇಕ, ಪಂಚಾಮೃತ ಅಭಿಷೃಕ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಸಂಜೆ ಅಕ್ಕಿಪೂಜೆಯನ್ನು ಮಾಡಲಾಗುತ್ತದೆ. ಭಕ್ತರಿಗೆ ದಾಸೋಹ ವ್ಯವಸ್ಥೆ ಹಮ್ಮಿಕೊಳಲಾಗಿದೆ. ಏ.21ರಂದು ಶ್ರೀಕೊಲ್ಲಾಪುರದಮ್ಮ ದೇವಿಗೆ ವಿಶೇಷ ಅಲಂಕಾರ ಹಾಗೂ ಊರಿನ ಗ್ರಾಮಸ್ಥರಿಂದ ಆರತಿ, ಭಾನದ ಸೇವೆ, ಸಂಜೆ ಶ್ರೀಕೊಲ್ಲಾಪುರದಮ್ಮ ದೇವಿಯ ಉತ್ಸವ ಊರಿನ ರಾಜಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.