ಮಲ್ಲಾಂಡಹಳ್ಳಿಯ ತಂಡ ಪ್ರಥಮ Mallandahalli 
ರಾಜ್ಯ

ಮಲ್ಲಾಂಡಹಳ್ಳಿಯ ತಂಡ ಪ್ರಥಮ Mallandahalli

ಕೋಲಾರ ಡೆಸ್ಕ್
ಕದರೀಪುರ: ಕೋಲಾರ ತಾಲೂಕು ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಮಲ್ಲಾಂಡಹಳ್ಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ದಿ.ಎಂ.ಶ್ರೀಕಾಂತ್​ ಅವರ ಾಪಕಾರ್ಥವಾಗಿ ಸೀತಿ ಮತ್ತು ಮದ್ದೇರಿ ಗ್ರಾಮ ಪಂಚಾಯಿತಿಮಟ್ಟದ ವಾಲಿಬಾಲ್​ ಪಂದ್ಯಾವಳಿಯನ್ನು ಸ್ನೇಹ ಲೋಕ ಯುವಕರ ಸಂ, ಎಂಮಲ್ಲಾಂಡಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.Mallandahalli
ವಾಲಿಬಾಲ್​ ಪಂದ್ಯಾವಳಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು, ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ ರಾಚಾಪುರ ಆರ್​.ಎನ್​.ಮಂಜುನಾಥ್​ ಕಾರ್ಯನಿರ್ವಹಿಸಿದರು.
ಎಂ.ಮಲ್ಲಾಂಡಹಳ್ಳಿಯ ಅಮೃತ ನಾಯಕತ್ವದ ತಂಡ ಮೊದಲ ಬಹುಮಾನವಾಗಿ ಟಗರು ಹಾಗೂ ಟ್ರೋಫಿ ಪಡೆದುಕೊಂಡಿತು. ಅಂಕತಟ್ಟಿ ಭೂಪತಿ ನಾಯಕತ್ವದ ತಂಡ ದ್ವೀತಿಯ ಬಹುಮಾನವಾಗಿ 9,999 ರೂ., ಮಟ್ನಹಳ್ಳಿಯ ಚಂದನ್​ ನಾಯಕತ್ವದ ತಂಡ ತೃತೀಯ ಬಹುಮಾನವಾಗಿ 4,999 ರೂ. ಟ್ರೋಫಿ ಪಡೆದುಕೊಂಡಿತು. ಎಂ.ಮಲ್ಲಾಂಡಹಳ್ಳಿ ಮತ್ತು ನಿರಂಜನ್​ ತಂಡ ನಾಲ್ಕನೆ ಬಹುಮಾನವಾಗಿ 2,499 ಪಡೆದುಕೊಂಡಿತು.
ಮದ್ಯಾಹ್ನ ಸುಡು ಬಿಸಿಲಿನ ಬೇಗೆಗೆ ಪ್ರೇಕರಿಗೆ ಹಾಸನ ಮತ್ತು ನೆರಳಿನ ವ್ಯವಸ್ಥೆ ಹಾಗೂ ಆಟಗಾರರಿಗೆ ಮತ್ತು ಪ್ರೇಕರಿಗೆ ತಂಪು ಪಾನೀಯ ಪಾನಕ, ಮಜ್ಜಿಗೆ, ಹೆಸರುಬೇಳೆ ಹಂಚಿದರು ಇವೆಲ್ಲದರ ಜತೆಗೆ ಬಿರಿಯಾನಿ ಊಟ ವ್ಯವಸ್ಥೆ ಮಾಡಲಾಗಿತ್ತು
ಸ್ನೇಹಲೋಕ ಯುವಕರ ಸಂ ಹಾಗೂ ಮಲ್ಲಾಂಡಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಆಟಗಾರರು ಪ್ರೇಕರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.