ಬಸವಕಲ್ಯಾಣ ತಾಲೂಕಿನ ಧನ್ನೂರ(ಕೆ) ಗ್ರಾಮದಲ್ಲಿ ಮಂಗಳವಾರ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾಜಿ ಎಂಎಲ್​ಸಿ ವಿಜಯಸಿಂಗ್​ ಮಾತನಾಡಿದರು. ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾಯ, ಧನರಾಜ ತಾಳಂಪಳ್ಳಿ, ನರಸಿಂಗರೆಡ್ಡಿ ಗದಲೆಗಾಂವ ಇದ್ದರು 
ರಾಜ್ಯ

ಮಲ್ಲಮ್ಮ ಜೀವನ ಚರಿತ್ರೆ ಜಗತ್ತಿಗೆ ಪ್ರೇರಣೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಎಂಎಲ್​ಸಿ ವಿಜಯಸಿಂಗ್​ ಅಭಿಮತ
  • ಧನ್ನೂರ(ಕೆ)ದಲ್ಲಿ ದೇವಸ್ಥಾನ ಕಟ್ಟಡ ಲೋಕಾರ್ಪಣೆ
ಬಸವಕಲ್ಯಾಣ: ಭಕ್ತಿಯಿಂದ ಜಗತ್ತಿನ ಮನಸ್ಸು ಗೆದ್ದ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ. ಅವರ ಜೀವನ ಚರಿತ್ರೆ, ಆದರ್ಶ ಜಗತ್ತಿಗೆ ಪ್ರೇರಣೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ವಿಜಯಸಿಂಗ್​ ಹೇಳಿದರು.
ತಾಲೂಕಿನ ಧನ್ನೂರ(ಕೆ) ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕೌಟುಂಬಿಕ ಕಲಹಗಳ ನಡುವೆ ಕಷ್ಟಗಳು, ಅವಮಾನ ಸಹಿಸಿಕೊಂಡು ಬದುಕಿದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರು. ಅವರು ತೋರಿದ ಮಾರ್ಗದರ್ಶನದಂತೆ ಎಲ್ಲರೂ ನಡೆಯಬೇಕಿದೆ ಎಂದರು.
ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ ಮಾತನಾಡಿ, ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನ ಚರಿತ್ರೆ ಎಲ್ಲರೂ ತಿಳಿದುಕೊಂಡು ಜೀವನದಲ್ಲಿ ಪ್ರೇರಣೆ ಪಡೆಯಬೇಕು. ಸಮಾಜದ ಜನರು ಸಂಘಟಿತರಾಗಬೇಕು ಎಂದು ಹೇಳಿದರು.
ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ ಮಾತನಾಡಿದರು.
ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಸಾನ್ನಿಧ್ಯ, ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ವಿಜಯರಡ್ಡಿ, ಗುರುನಾಥ್​ ರಡ್ಡಿ, ಶಿವರಡ್ಡಿ, ಗೋವಿಂದ ರಡ್ಡಿ, ಭೀಮರಡ್ಡಿ ಪಾಟೀಲ್​, ವೀರಾರಡ್ಡಿ ಪಾಟೀಲ್​ ಬಸವರಾಜ ಮಾಶೆಟ್ಟಿ, ಸಚಿನ ತೇಲಂಗ್​, ಅನಿಲ ಮಾಶೆಟ್ಟಿ, ಶಿವಕುಮಾರ ಮೇತ್ರೆ, ಪ್ರದಿಪ್​ ಬಿರಾದಾರ, ಶಿವಶಂಕರ ಬಚ್ಚಣ್ಣೆ ಸೇರಿ ಅನೇಕ ಭಕ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಧನಶ್ರೀ ಮಾಣಿಕರಡ್ಡಿ ಫುರ್ಮೆ ಸ್ವಾಗತಿಸಿದರು. ಜಗನ್ನಾಥರಡ್ಡಿ ಕಲ್ಲೂರೆ ನಿರೂಪಣೆ ಮಾಡಿದರು.
"

ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ಪ್ರತಿಕೂಲ ಪ್ರಪಂಚದಲ್ಲಿಯೂ ಪರಮಾರ್ಥ ಮಾಡಿದವರು. ಅನುಕೂಲಕರ ಜೀವನದಲ್ಲಿ ಭಕ್ತಿ ಮಾಡುವುದು ದೊಡ್ಡದಲ್ಲ. ಪ್ರಪಂಚ, ಪರಿಸರ ಎಲ್ಲವೂ ಪ್ರತಿಕೂಲವಾಗಿರುವಾಗಲೂ ಭಕ್ತಿ ಮಾಡಿದ ಏಕೈಕ ಶ್ರೇಷ್ಠ ಮಹಿಳಾ ಶಿವಭಕ್ತೆ ಹೇಮರಡ್ಡಿ ಮಲ್ಲಮ್ಮ. ಅವರು ಆದರ್ಶ ಗೃಹಣಿ, ಆದರ್ಶ ಮಹಾಭಕ್ತೆ, ಅವರ ಆದರ್ಶದ ಮಾರ್ಗ ನಾವೆಲ್ಲರೂ ಅನುಸರಿಸಿದರೆ ಬದುಕು ಸಾರ್ಥಕವಾಗುತ್ತದೆ.

— > ಶ್ರೀ ಪ್ರಣವಾನಂದ ಸ್ವಾಮೀಜಿ ಮುಚಳಂಬ

"

ಜೀವನದಲ್ಲಿನ ಕಷ್ಟಗಳನ್ನು ಮುಟ್ಟಿ ನಿಂತು ಸಾಧನೆ ಮಾಡಿದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ. ಧನ್ನೂರ(ಕೆ)ಯಲ್ಲಿ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ಸುಸಜ್ಜಿತ ಮತ್ತು ಭವ್ಯವಾಗಿ ನಿರ್ಮಿಸಲಾಗಿದೆ. ಮಹಾತ್ಮರ ಮತ್ತು ಶಿವಶರಣರ ತತ್ವಾದರ್ಶಗ ಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ನಿತ್ಯ ಬದುಕಿನಲ್ಲಿ ಪಾಲನೆ ಮಾಡಬೇಕು.

— > ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ