ಮಲ್ಲಮ್ಮ ಅಭಿವೃದ್ಧಿ ಪ್ರಾ-ಧಿಕಾರ ರಚನೆಗೆ ಆಗ್ರಹಿಸಿ ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ವತಿಯಿಂದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು. ಸವಿತಾ ಪಾಟೀಲ, ನೀಲಮ್ಮ ಕರಿಕಟ್ಟಿ, ಮಲ್ಲಮ್ಮ ಗೋಧೋಳಿ, ಪಾರ್ವತಿ ಕರಿಕಟ್ಟಿ ಇತರರಿದ್ದರು.
ಯಾಸೀನ್ ಕಿತ್ತೂರು ಮಲ್ಲಮ್ಮನ ಬೆಳವಡಿ
ಜಗತ್ತಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ 2,000 ಮಹಿಳೆಯರ ಸೈನ್ಯ ಕಟ್ಟಿ ಹೋರಾಡಿದ ವೀರ ರಾಣಿ ಬೆಳವಡಿ ಮಲ್ಲಮ್ಮಳ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಕಳೆದ 15 ವರ್ಷಗಳಿಂದ ಮಲ್ಲಮ್ಮನ ಬೆಳವಡಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಸ್ಪಂದಿಸಿಲ್ಲ. ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಾದರೂ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕೆಂದು ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸವಿತಾ ಪಾಟೀಲ ಮನವಿ ಮಾಡಿದ್ದಾರೆ.
ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ ಸುಮಾರು ನಾಲ್ಕೆದು ವರ್ಷಗಳಿಂದ ಹಗಲಿರಳು ಹೋರಾಟ ಮಾಡಿಕೊಂಡು ಬಂದಿದ್ದು, ಹಲವಾರು ಬಾರಿ ಮನವಿ ಸಲ್ಲಿಸುವ ಜತೆಗೆ ಪತ್ರ ಚಳವಳಿ ಮೂಲಕ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಎರಡು ಸಾವಿರ ಪತ್ರ ಕಳುಹಿಸಿದ್ದಾರೆ. ಪ್ರತಿಯಾಗಿ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಪ್ರತಿಕ್ರಿಯೆ ಬಂದಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನು ಭೇಟಿಯಾಗಿ ಮಲ್ಲಮ್ಮ ಪ್ರಾಧಿಕಾರದ ರಚನೆ ಬಗ್ಗೆ ಮನವರಿಕೆ ಮಾಡಲಾಗಿದೆ. ಅಲ್ಲದೆ, ವೀರರಾಣಿ ಬೆಳವಡಿ ಮಲ್ಲಮ್ಮನ ಇತಿಹಾಸ ಒಳಗೊಂಡ ಏಳು ನಿಮಿಷದ ಸಾಕ್ಷ$್ಯ ಚಿತ್ರದ ವಿಡಿಯೋ ಹಾಗೂ ಪುಸ್ತಕವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಮಲ್ಲಮ್ಮ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಳೆದ ವರ್ಷ ದೆಹಲಿಯ ಸಂಸತ್ ಸಭಾಭವನದಲ್ಲಿ ಸಂಸದ ಜಗದೀಶ ಶೆಟ್ಟರ ನೇತೃತ್ವದಲ್ಲಿ ರಾಣಿ ಬೆಳವಡಿ ಮಲ್ಲಮ್ಮಳ ಅಶ್ವಾರೂಢ ಮೂರ್ತಿಯನ್ನು ಸಂಸತ್ ಭವನದ ಎದುರು ಪ್ರತಿಷ್ಠಾಪಿಸಲು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜೂಜು ಅವರಿಗೆ ಮಹಿಳಾ ಪ್ರತಿಷ್ಠಾನ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದರು. ಒಟ್ಟಾರೆ ಮಲ್ಲಮ್ಮನ ಬೆಳವಡಿ ಗ್ರಾಮದ ಗುರು&ಹಿರಿಯರು ಹಾಗೂ ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಸದಸ್ಯರು ರಾಣಿ ಬೆಳವಡಿ ಮಲ್ಲಮ್ಮಳ ಪ್ರಾಧಿಕಾರದ ೂಷಣೆಗಾಗಿ ಚಾತಕ ಪಗಳಂತೆ ಕಾಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಅವರು ಮಲ್ಲಮ್ಮ ಅಭಿವೃದ್ಧಿ ಪ್ರಾಧಿ-ಕಾರ ರಚನೆಗೆ ಧ್ವನಿ ಎತ್ತಬೇಕು ಎಂದು ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ ಒತ್ತಾಯಿಸಿದೆ.