ಯಾದಗಿರಿಯಲ್ಲಿ ಶುಕ್ರವಾರ ನಡೆದ ಜಿ¯್ಲÁ ವಕೀಲರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಿ.ಎಸ್.ಮಾಲಿಪಾಟೀಲï ಆಯ್ಕೆಯಾದರು. ಈ ವೇಳೆ ವಿಜೇತರು ಸೇರಿ ಪದಾಽಕಾರಿಗಳು ವಿಜಯೋತ್ಸವ ಆಚರಿಸಿದರು.
- ಯಾದಗಿರಿ ಜಿಲ್ಲಾ ವಕೀಲರ ಸಂಘದ ಚುನಾವಣೆ
- ನಾಲ್ವರು ಅವಿರೋಧ ಆಯ್ಕೆ
ಜಿ¯್ಲÁ ವಕೀಲರ ಸಂಘದ ೨೦೨೬-೨೭ನೇ ಸಾಲಿಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಸಿ.ಎಸ್. ಮಾಲಿಪಾಟೀಲ್ ಅವರು ತಮ್ಮ ಪ್ರತಿಸ್ಪಽðಗಿಂತ ೩೦ ಮತಗಳು ಹೆಚ್ಚಿಗೆ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿz್ದÁರೆ ಎಂದು ಸಂಘದ ಮುಖ್ಯ ಚುನಾವಣಾ ಅಽಕಾರಿ ನಾಗಭೂಷಣ ಬಿ.ಆಡಕಿ ತಿಳಿಸಿz್ದÁರೆ.
ಇಲ್ಲಿನ ಜಿ¯್ಲÁ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಮತದಾನದಲ್ಲಿ ನಂತರ ತಡರಾತ್ರಿಯವರೆಗೂ ಮತ ಎಣಿಕೆಯಲ್ಲಿ ಮಾಲಿಪಾಟೀಲ್ ಅವರು ೧೭೦ ಮತ ಪಡೆದು ವಿಜೇತರಾದರೆ, ಅವರ ಪ್ರತಿ ಸ್ಪಽð ಶಾಂತಪ್ಪ ಎಸ್. ಖಾನಳ್ಳಿ ೧೪೦ ಮತ ಪಡೆದು ಪರಾಭವಗೊಂಡರು.
೧೯೧ ಮತಗಳನ್ನು ಪಡೆದ ದೇವೇಂದ್ರಪ್ಪ ಎಚ್.ಯರಗೋಳ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಇದೇ ಸ್ಥಾನಕ್ಕೆ ಸ್ಪಽðಸಿದ್ದ ಶಶಿಧರ ಎಸ್.ಕಮತಗಿ ೧೧೮ ಮತ ಪಡೆದಿದ್ದು, ಒಟ್ಟು ೭೩ ಮತಗಳಿಂದ ಪರಾಭವಗೊಂಡರು. ೧೫೬ ಮತಗಳನ್ನು ಪಡೆದು ಪ್ರಧಾನ ಕಾರ್ಯದರ್ಶಿಯಾಗಿರುವ ಗೋವಿಂದ ಬಿ.ಜಾಧವ್ ಆಯ್ಕೆಯಾದರೆ ಇವರ ಪ್ರತಿಸ್ಪಽðಗಳಾದ ಯಂಕಟರಡ್ಡಿ ೧೪೦ ಮತಗಳನ್ನು ಪಡೆದು ಎರಡನೇ ಸ್ಥಾನ ಮತ್ತು ಭೀಮಾಶಂಕರ ೧೨ ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅವಿರೋಧ ಆಯ್ಕೆ: ಮಹಿಳಾ ಉಪಾಧ್ಯಕ್ಷೆ ಸ್ಥಾನಕ್ಕೆ ನಾಗರತ್ನ ಎಂ.ಅನಪುರ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ದೇಶಮುಖ ಪ್ರಶಾಂತ, ಖಜಾಂಚಿ ಸ್ಥಾನಕ್ಕೆ ವಿನೋದಕುಮಾರ ಜೈನ ಹಾಗೂ ಮಹಿಳಾ ಖಜಾಂಚಿ ಸ್ಥಾನಕ್ಕೆ ಶ್ಯಾಮಾಲಾ ವಾರದ ಅವರು ಅವಿರೋಧವಾಗಿ ಆಯ್ಕೆಯಾಗಿz್ದÁರೆ ಎಂದು ಮಾಹಿತಿ ನೀಡಿದರು.
ಸಂಘದ ಚುನಾವಣೆ ಸುಸೂತ್ರವಾಗಿ ನಡೆದಿದ್ದು, ಸಂಘದ ೩೩೭ ಸದಸ್ಯರ ಪೈಕಿ ೩೧೪ ಸದಸ್ಯರು ತಮ್ಮ ಮತ ಚಲಾಯಿಸಿz್ದÁರೆ. ಸಹಾಯಕ ಚುನಾವಣಾ ಅಽಕಾರಿಗಳಾಗಿ ವಿಜಯಾನಂದ ಎಸ್.ಯರಗೋಳ ಹಾಗೂ ಶಿವರಾಮರೆಡ್ಡಿ ವಿ.ಪಾಟೀಲ್ ನಿಯೋಜನೆಗೊಂಡಿದ್ದರು.