ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ವಾಲ್ಪೋಸ್ಟರ್ನ್ನು ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಮಹಾದೇವ ಬೇಲೂರೆ, ಕಾಶಿನಾಥ ಲದ್ದೆ ಇತರರಿದ್ದರು.
- ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಕರೆ
- ಭಾತಂಬ್ರಾದಲ್ಲಿ ವಾಲ್ ಪೋಸ್ಟರ್ ಬಿಡುಗಡೆ
ಭಾಲ್ಕಿ: ಭಾತಂಬ್ರಾ ಗ್ರಾಮದಲ್ಲಿ ಏ.9ರಿಂದ 15ರವರೆಗೆ ನಡೆಯಲಿರುವ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಸದ್ಭಕ್ತರು ತನು, ಮನ ಮತ್ತು ಧನದಿಂದ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ನಿರಂಜನ ಜಗದ್ಗುರು ಸಂಸ್ಥಾನ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಭಾತಂಬ್ರಾ ಗ್ರಾಮದ ಜಗದ್ಗುರು ನಿರಂಜನ ಸಂಸ್ಥಾನ ಮಠದಲ್ಲಿ ಮಂಗಳವಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ವಾಲ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಪೂಜ್ಯರು, ಪ್ರತಿ ವರ್ಷದಂತೆ ಈ ಬಾರಿಯು ಸದ್ಭಕ್ತರ ಸಹಕಾರದೊಂದಿಗೆ ಜಾತ್ರಾ ಮಹೋತ್ಸವ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಜರುಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾದೇವ ಬೇಲೂರೆ ಮಾತನಾಡಿ, ಜಗದ್ಗುರು ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಶ್ರದ್ಧೆ, ಭಕ್ತಿಯಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ಕಾಶಿನಾಥ ಲದ್ದೆ, ಮಹಾಂತೇಶ ಪಾಟೀಲ್, ನಾಗನಾಥ ಗಾಮಾ, ಪ್ರೇಮನಾಥ ಗಾಮಾ, ಶಾಲಿವಾನ ಖರಾಬೆ, ಪ್ರಭು ಪಂಚಾಕ್ಷರೆ, ಡಾ. ಅನಿಲ ಹನಪಟ್ಟೆ, ಸೋಮನಾಥ ಟೋಕರೆ, ಚಂದ್ರಕಾಂತ ಲದ್ದೆ, ಬಸವ ಭೂರಾಳೆ, ಶಂಕರ ಪಂಚಾಕ್ಷರೆ, ಕಿರಣ ಬಿರಾದಾರ ಇತರರಿದ್ದರು.