ಹುಮನಾಬಾದ್ನಲ್ಲಿ ಭಾನುವಾರ ಎಸ್ಐಆರ್ ಮಹಾ ಅಭಿಯಾನಕ್ಕೆ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಚಾಲನೆ ನೀಡಿದರು. ಬಾಬುವಾಲಿ, ಮಹೇಶ್ವರ ಸ್ವಾಮಿ, ಅನಿಲ ಪಸರ್ಗಿ ಇತರರಿದ್ದರು.
- ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕರೆ
- ಹುಮನಾಬಾದ್ನ ವಿವಿಧೆಡೆ ಮಹಾಸಂಪರ್ಕ ಅಭಿಯಾನ
ಹುಮನಾಬಾದ್: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಅಭಿಯಾನದಲ್ಲಿ ಯುವ ಮೋರ್ಚಾ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕರೆ ನೀಡಿದರು.
ಪಟ್ಟಣದಲ್ಲಿ ಭಾನುವಾರ ವಿವಿಧ ವಾರ್ಡ್ಗಳಲ್ಲಿ ಎಸ್ಐಆರ್ ಮಹಾ ಅಭಿಯಾನ&ಮನೆ ಮನೆಗೆ ಬಿಜೆಪಿ ಕಾರ್ಯಕರ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18 ವರ್ಷ ಪೂರೈಸಿದ ಪ್ರತಿಯೊಬ್ಬ ಅರ್ಹ ಯುವಕರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಬೂತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ತಿಳಿಸಿದರು.
ಪ್ರಜಾಪ್ರಭುತ್ವದ ಬಲ ಯುವಜನತೆಯಲ್ಲಿದ್ದು, ಮಂಡಲ, ಶಕ್ತಿಕೇಂದ್ರ ಹಾಗೂ ಬೂತ್ ಮಟ್ಟದಲ್ಲಿ ಯುವ ಮೋರ್ಚಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಜವಾಬ್ದಾರಿಯನ್ನು ಯುವ ಕಾರ್ಯಕರ್ತರು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಬಿಎಲ್ಎಗಳೊಂದಿಗೆ ಸಮನ್ವಯ ಸಾಧಿಸಿ ಮತದಾರರ ಪಟ್ಟಿಯ ತಿದ್ದುಪಡಿ ಹಾಗೂ ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮಂಡಲ ಪ್ರಭಾರಿ ಬಾಬುವಾಲಿ, ಸಹ ಪ್ರಭಾರಿ ಮಹೇಶ್ವರ ಸ್ವಾಮಿ, ಮಂಡಲ ಅಧ್ಯಕ್ಷ ಅನಿಲ ಪಸರ್ಗಿ, ಬಿಎಲ್ಎ 1 ನಾಗಭೂಷಣ ಸಂಗಮ್, ನಗರ ಘಟಕ ಅಧ್ಯಕ್ಷ ಜ್ಞಾನದೇವ ಧೂಮಾಳೆ, ಪ್ರಮುಖರಾದ ರವಿ ಹೊಸಳ್ಳಿ, ಗೋಪಾಲಕೃಷ್ಣ ಮೋಹಳೆ, ಸುನೀಲ ಪತ್ರಿ, ರಾಜರಡ್ಡಿ, ಅಂಜುರಡ್ಡಿ, ನಿಂಗರಡ್ಡಿ ಸೇರಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.