ಸುರಪುರ ತಹಸಿಲ್ ಕಚೇರಿಯಲ್ಲಿ ಸ್ವಾತಂತ್ರ‍್ಯೋತ್ಸವ ನಿಮಿತ್ತ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾgರ್ ಎಚ್.ಎ.ಸರಕಾವಸ್ ಮಾತನಾಡಿದರು. ಪಿಐ ಉಮೇಶ ಎಂ.ನಾಯಕ, ಲಾಲಸಾಬ್ ಪೀರಾಪುರ, ರಾಮನಗೌಡ ಮಾಲಿಪಾಟೀಲ್ ಇತರರಿದ್ದರು.
- ತಹಸೀಲ್ದಾರ್ ಸರಕವಾಸ್ ಸೂಚನೆ
- ಸುರಪುರ ತಹಸಿಲ್ ಕಚೇರಿಯಲ್ಲಿ ಪೂರ್ವಭಾವಿ ಸಭೆ
ನಗರದ ಪ್ರಭು ಕಾಲೇಜು ಮೈದಾನದಲ್ಲಿ ಆ.೧೫ರಂದು ನಡೆಯುವ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಎಚ್.ಎ.ಸರಕವಾಸ್ ಅಽಕಾರಿಗಳಿಗೆ ಸೂಚನೆ ನೀಡಿದರು.
ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಆ.೧೫ರಂದು ಬೆಳಗ್ಗೆ ೮ಕ್ಕೆ ಕಡ್ಡಾಯವಾಗಿ ರಾಷ್ಟçಪಿತ ಮಹಾತ್ಮ ಗಾಂಽ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಿದ ನಂತರ ಧ್ವಜಾರೋಹಣ ನೆರವೇರಿಸಬೇಕು ಎಂದು ಹೇಳಿದರು.
ತಾಲೂಕು ಆಡಳಿತದಿಂದ ಪ್ರಭು ಕಾಲೇಜು ಮೈದಾನದಲ್ಲಿ ಅಂದು ಬೆಳಗ್ಗೆ ೮.೪೫ಕ್ಕೆ ಧ್ವಜಾರೋಹಣ ನೆರವೇರಲಿದೆ. ನಂತರ ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ ಪಥ ಸಂಚಲನ, ಧ್ವಜ ವಂದನೆ ಸ್ವೀಕಾರ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.
ಇದಕ್ಕೆ ಬೇಕಾದ ಮೈಕ್, ಶಾಮಿಯಾನ ಆಸನ, ಕುಡಿವ ನೀರು, ಅಲ್ಪ ಉಪಹಾರ, ಆಂಬುಲೆನ್ಸ್, ಅಗ್ನಿಶಾಮಕ ದಳ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅಽಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕುಕ.
ಸಭೆಯಲ್ಲಿ ಪಿಐ ಉಮೇಶ ಎಂ.ನಾಯಕ, ಅಽಕಾರಿಗಳಾದ ಲಾಲಸಾಬ್ ಪೀರಾಪುರ, ರಾಮನಗೌಡ ಮಾಲಿಪಾಟೀಲ್, ಪಂಡಿತ್ ನಿಂಬೂರ್, ಯಂಕಣ್ಣ ಟಣಕೇದಾರ್, ಗುರುರಾಜ್ ಸಜ್ಜನ್, ಎಇಇ ಶಾಂತಪ್ಪ ಹೋಮಗಾರ್ಡ್ ಅಽಕಾರಿ ವೆಂಕಟೇಶ, ಶಿವುಪುತ್ರ ಸೇರಿ ಇತರರಿದ್ದರು. ಶಾಸಕರ ಆಪ್ತ ಸಹಾಯಕ ಹಣಮಂತ್ರಾಯ ಮಕಾಶಿ, ರಮೇಶ ದೊರೆ ಆಲ್ದಾಳ, ಭೀಮನಗೌಡ ಲಕ್ಷ್ಮೀ, ಹಣಮಂತ ಕಟ್ಟಿಮನಿ ಬೊಮ್ಮನಳ್ಳಿ, ಭೀಮು ನಾಯಕ ಮಲ್ಲಿಭಾವಿ, ಶಿವಮೋನಯ್ಯ ಎಲ್‌ಡಿ ನಾಯಕ ಸೇರಿ ಇತರರಿದ್ದರು.
ಸಭೆಗೆ ಗೈರಾದವರಿಗೆ ನೋಟಿಸ್ ಜಾರಿ
ರಾಷ್ಟಿçÃಯ ಹಬ್ಬವಾದ ಸ್ವಾತಂತ್ರ‍್ಯೋತ್ಸವ ಸಭೆಗೆ ಬಹುತೇಕ ಇಲಾಖೆ ಅಽಕಾರಿಗಳು ಗೈರುಹಾಜರಾಗಿರುವುದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿ ಜಯಂತಿ ಹಾಗೂ ರಾಷ್ಟಿçÃಯ ಹಬ್ಬ ಕಾರ್ಯಕ್ರಮಗಳಲ್ಲೂ ಅಽಕಾರಿಗಳು ನಿರ್ಲಕ್ಷ÷್ಯ ತೋರುತ್ತಿದ್ದಾರೆ. ಅವರನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಗೈರುಹಾಜರಾದ ಅಽಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಚ್.ಎ.ಸರಕಾವಸ್, ಸಭೆಗೆ ಗೈರಾದ ಅಽಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.