ಗೌಡಗೇರಿ ಗ್ರಾಮದಲ್ಲಿ ಶನಿವಾರ ಶಾಲಾ ದಾಖಲಾತಿ ಆಂದೋಲನ ನಿಮಿತ್ತ ಶಿಕ್ಷಕರು ಮನೆ ಮನೆಗೆ ತೆರಳಿ ಪಾಲಕರಿಗೆ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವಿ ಮಾಡಿದರು. ಮುಖ್ಯಗುರು ಡಿ.ಡಿ.ರಾಂಪುರ, ಮಹೆಬೂಬ್​ ಪಟೇಲ್​, ಸುನೀಲ್​, ಮಂಜುನಾಥ, ಜ್ಯೋತಿ, ಮಹಾಂತಗೌಡ ಪೊಲೀಸ್​ ಬಿರಾದಾರ, ನಿಂಗಣ್ಣ ಮಾಲಿ ಬಿರಾದಾರ, ಹಳ್ಳೇರಾವ ಕುಲಕರ್ಣಿ ಇತರರಿದ್ದರು. 
ರಾಜ್ಯ

ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ಡಿ.ಡಿ.ರಾಂಪುರ ಮನವಿ
  • ಗೌಡಗೇರಿಯಲ್ಲಿ ಶಾಲಾ ದಾಖಲಾತಿ ಆಂದೋಲನ
ಕೆಂಭಾವಿ: ಶಾಲೆಗಳು ಆರಂಭವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಮುಖ್ಯಗುರು ಡಿ.ಡಿ.ರಾಂಪುರ ಮನವಿ ಮಾಡಿದರು.
ಗೌಡಗೇರಿ ಗ್ರಾಮದ ಪಿಎಂಶ್ರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ಶನಿವಾರ ಹಮ್ಮಿಕೊಂಡ್ದ ಶಾಲಾ ದಾಖಲಾತಿ ಆಂದೋಲನ ನಿಮಿತ್ತ ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂಬುದು ಪ್ರತಿ ಮಗುವಿನ ಆದ್ಯ ಕರ್ತವ್ಯ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಉಪಯುಕ್ತ ಯೋಜನೆಗಳನ್ನು ರೂಪಿಸಿದ್ದು ಅದರಂತೆ ನಮ್ಮ ಗ್ರಾಮದ ಈ ಶಾಲೆಯಲ್ಲಿ ಹಲವು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಉನ್ನತಿಕರಿಸಿದ ಶಾಲೆಯಲ್ಲಿ ಸುಸಜ್ಜಿತ ಕಟ್ಟಡ, ಉತ್ತಮ ಗ್ರಂಥಾಲಯ, ಆಟದ ಮೈದಾನ, ಎಲ್ಲ ವಿಷಯಗಳ ನುರಿತ ಶಿಕ್ಷಕರು, ಪಠ್ಯದ ಜತೆಗೆ ಚಿತ್ರಕಲೆ, ಸಂಗೀತ, ಯೋಗ ಸೇರಿ ಹಲವು ಕಲಿಕೆಗಳನ್ನು ಇಲ್ಲಿ ಕಲಿಸಿಕೊಡಲಾಗುವುದು. ವಾರದ ಆರು ದಿನ ಪೌಷ್ಠಿಕ ಆಹಾರ, ಉಚಿತ ಪಠ್ಯಪುಸ್ತಕ, ಸಮವಸ, ಶೂ, ಕಂಪ್ಯೂರ್​ ಕಲಿಕೆ, ಉಚಿತ ಆರೋಗ್ಯ ತಪಾಸಣೆ, ಶಾಲಾ ಶೈಕ್ಷಣಿಕ ಪ್ರವಾಸ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ. ನುರಿತ ಶಿಕ್ಷಕರಿಂದ ಆನ್​ಲೈನ್​ ತರಬೇತಿ ಸೇರಿ ಹಲವು ಉಪಯುಕ್ತ ಯೋಜನೆಗಳಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಥಮಿಕ ಶಾಲೆ ಮುಖ್ಯಗುರು ಮಹೆಬೂಬ್​ ಪಟೇಲ್​, ಸುನೀಲ, ಮಂಜುನಾಥ, ಜ್ಯೋತಿ, ಮಹಾಂತಗೌಡ ಪೊಲೀಸ್​ ಬಿರಾದಾರ, ನಿಂಗಣ್ಣ ಮಾಲಿ ಬಿರಾದಾರ, ಹಳ್ಳೇರಾವ ಕುಲಕರ್ಣಿ, ಭೀಮನಗೌಡ ದೇಸಾಯಿ, ಹಣಮಂತಿ ಇತರರಿದ್ದರು.