ಶಹಾಬಾದ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪರಮೇಶ್ವರ ಪೆಂಚನಕರ್, ಲೋಹಿತ ಕಟ್ಟಿ, ಬನ್ನಿಲಾಲ್ ಚವ್ಹಾಣ್, ಕರಿಬಸಪ್ಪ, ಅಂಬಿಕಾ ಹಂಗರಗಿ ಇತರರಿದ್ದರು.
ಶಹಾಬಾದ್: ಪದವಿಪೂರ್ವ ಶಿಕ್ಷಣ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ತಿರುವಾಗಿದ್ದು, ಈ ಹಂತದಲ್ಲಿ ಸಮಯದ ಸದ್ಬಳಕೆ ಮಾಡಿಕೊಂಡು ಕಠಿಣ ಶ್ರಮದೊಂದಿಗೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಪ್ರಾಚಾರ್ಯ ಪರಮೇಶ್ವರ ಪೆಂಚನಕರ್ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಲೋಹಿತ ಕಟ್ಟಿ ಮಾತನಾಡಿದರು. ಬನ್ನಿಲಾಲ್ ಚವ್ಹಾಣ್, ಕರಿಸಬಸಪ್ಪ, ಅಂಬಿಕಾ ಹಂಗರಗಿ, ಮಹಾದೇವ ಪಾಟೀಲ್, ರವಿ ಚವ್ಹಾಣ್, ಬಸವರಾಜ ಪರಸಗೊಂಡ, ಜಗದೇವಪ್ಪ, ಸುರೇಶ ಪವಾರ್, ವೆಂಕಟೇಶ, ಮರಲಿಂಗ ಯಾದಗಿರಿ, ಸ್ಟೇಲಿನಾ ಇದ್ದರು. ಸಾವಿತ್ರಿ ಪ್ರಾರ್ಥಿಸಿದಳು, ನಾಗಮ್ಮ ಸ್ವಾಗತಿಸಿಳು, ದೇವಿಕಾ, ಸಂಗೀತಾ ನಿರೂಪಣೆ ಮಾಡಿದರು. ಭವಾನಿ ವಂದಿಸಿದರು.