ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಾಬಣ್ಣ ಗಣಪುರ ಹತ್ತಿಕುಣಿ, ಲಕ್ಷಿ÷್ಮÃ ರಾಮಪ್ಪನೋರ ಕುಟುಂಬಸ್ಥರಿಗೆ ಪಿಎಂಜೆಜೆವೈಯಡಿ ಮಂಜೂರಾದ ತಲಾ ೨ ಲಕ್ಷ ರೂ. ಚೆಕ್‌ನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿಪಾಟೀಲ್, ಬ್ಯಾಂಕ್‌ನ ವ್ಯವಸ್ಥಾಪಕಿ ರೇಣುಕಾ ಗಂಧಮ್ ವಿತರಿಸಿದರು.
- ಶರಣಗೌಡ ಮಾಲಿಪಾಟೀಲ್ ಸಲಹೆ
- ಫಲಾನುಭವಿಗಳಿಗೆ ತಲಾ ರು.೨ ಲಕ್ಷ ಚೆಕ್ ವಿತರಣೆ
ಮಂಜೂರಾದ ಪರಿಹಾರದ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿಪಾಟೀಲ್ ಹೇಳಿದರು.
ತಾಲೂಕಿನ ಹತ್ತಿಕುಣಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದುವ ಜತೆಗೆ ವಿಮಾ ಕಂತಿನ ಮೊತ್ತ ಪಾವತಿಸಿ ಸ್ವಾಭಾವಿಕವಾಗಿ ಮೃತಪಟ್ಟ ಗ್ರಾಹಕರಾದ ಸಾಬಣ್ಣ ಗಣಪುರ ಹತ್ತಿಕುಣಿ ಹಾಗೂ ಲಕ್ಷ್ಮೀ ರಾಮಪ್ಪನೋರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆವೈ) ಅಡಿಯಲ್ಲಿ ಮಂಜೂರಾದ ತಲಾ ೨ ಲಕ್ಷ ರೂ. ಚೆಕ್‌ನ್ನು ಶುಕ್ರವಾರ ವಿತರಿಸಿ ಮಾತನಾಡಿದರು.
ಪರಿಹಾರ ಚೆಕ್‌ಗಳನ್ನು ಪಡೆದ ಕುಟುಂಬಸ್ಥರು ಆ ಹಣವನ್ನು ದುಂದುವೆಚ್ಚ ಮಾಡದೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಬಳಸಿ, ಅದು ಸಾರ್ಥಕವಾಗಿ ಅವರು ವಿದ್ಯಾವಂತರಾಗಿ ಗುರಿ ತಲುಪಿ ಕುಟುಂಬಕ್ಕೆ ಆಸರೆಯಾಗುತ್ತಾರೆ ಎಂದರು. ಬ್ಯಾಂಕ್‌ನ ವ್ಯವಸ್ಥಾಪಕಿ ರೇಣುಕಾ ಗಂಧಮï ಮಾತನಾಡಿ, ನಾವೂ ಈಗಾಗಲೇ ಈ ಪಿಎಂಜೆಜೆವೈ ಯೋಜನೆ ಲಾಭದ ಬಗ್ಗೆ ಪ್ರತಿಯೊಬ್ಬ ಗ್ರಾಹಕರಿಗೂ ತಿಳಿಸುತ್ತಿದ್ದೇವೆ, ಇನ್ನೂ ಹೆಚ್ಚು ಗ್ರಾಹಕರು ಈ ಯೋಜನೆಯ ವಿಮಾ ಕಂತಿನ ಹಣವನ್ನು ಪ್ರತಿ ವರ್ಷ ಪಾವತಿಸಬೇಕು. ಅವರ ಕಷ್ಟದಲ್ಲಿ ಆರ್ಥಿಕ ನೆರವು ಸಿಗಲಿದೆ ಎಂದರು. ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಮಧುಶಂಕರ ನಾಯ್ಡು, ಖಜಾಂಚಿ ಪರಶುರಾಮ, ಸಿಬ್ಬಂದಿ ಬಸವರಾಜ ಕೌಳೂರ, ಪೃಥ್ವಿರಾಜ ಹೊನಗೇರಾ, ಚಂದ್ರಲಿAಗ ಮುರಾರಿ, ಶರಣಪ್ಪ ಶಂಕ್ರಪ್ಪನೋರ ಇತರರಿದ್ದರು.