ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಗ್ರಾಪಂನಲ್ಲಿ ಆಯೋಜಿಸಿದ್ದ ಕಾನೂನು ಅರಿವು&ನೆರವು ಕಾರ್ಯಕ್ರಮದಲ್ಲಿ ಸಹಾಯಕ ಕಾನೂನು ನೆರವು ಅಭೀರಕ್ಷಕ ಮಲ್ಲಿಕಾರ್ಜುನ ಎಂ.ಮನಗನಾಳ ಮಾತನಾಡಿದರು. ಪಿಡಿಒ ವಿಜಯಲ್ಮ, ಭೀಮಣ್ಣ ವಡವಟ್, ಅರ್ಜುನ ರಾಠೋಡ, ಬಾಬು ಕಲಾಲ್ ಇತರರಿದ್ದರು
- ಅಭೀರಕ್ಷಕ ಮನಗನಾಳ ಸಲಹೆ
- ಸೈದಾಪುರನಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಗುರುಮಠಕಲ್: ಸಾರ್ವಜನಿಕ ಸೇವೆಗಳ ಸಂಬಂಧಿತ ವಿವಾದವನ್ನು ಕಾಯಂ ಜನತಾ ನ್ಯಾಯಾಲಯದಲ್ಲಿ ಮತ್ತು ದೀರ್ಘಕಾಲ ಬಾಕಿ ಇರುವ ಪ್ರಕರಣ ಶೀಘ್ರ ಪರಿಹರಿಸಿಕೊಳ್ಳುವಲ್ಲಿ ಲೋಕ ಅದಾಲತ್ ಅತ್ಯಂತ ಮಹತ್ವ ವಹಿಸಿದ್ದು, ಹೀಗಾಗಿ ಪ್ರತಿಯೊಬ್ಬರೂ ಈ ಅದಾಲತ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಾಯಕ ಕಾನೂನು ನೆರವು ಅಭೀರಕ್ಷಕ ಮಲ್ಲಿಕಾರ್ಜುನ ಎಂ.ಮನಗನಾಳ ಹೇಳಿದರು.
ಮತ ಕ್ಷೇತ್ರದ ಸೈದಾಪುರ ಗ್ರಾಪಂ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಇತ್ತೀಚೆಗೆ ಹಮ್ಮಿಕೊಂಡ ಕಾಯಂ ಜನತಾ ನ್ಯಾಯಾಲಯ ಹಾಗೂ ರಾಷ್ಟ್ರೀಯ ಲೋಕ ಅದಾಲತ್ಗಳ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದದ ಅವರು, ಸಾಮಾನ್ಯ ನಾಗರಿಕರು ತಮ್ಮ ಹಕ್ಕುಗಳ ಕುರಿತು ಅರಿವು ಹೊಂದಿ, ನ್ಯಾಯವನ್ನು ಸುಲಭವಾಗಿ ಪಡೆಯಲು ಈ ವ್ಯವಸ್ಥೆಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಸುಲಭ ಮತ್ತು ತ್ವರಿತವಾಗಿ ನ್ಯಾಯ ದೊರಕುವ ವ್ಯವಸ್ಥೆಗಳಾದ ಕಾಯಂ ಜನತಾ ನ್ಯಾಯಾಲಯ ಹಾಗೂ ರಾಷ್ಟ್ರೀಯ ಲೋಕ ಅದಾಲತ್ನ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಸಹಾಯಕ ಕಾನೂನು ನೆರವು ಅಭೀರಕ್ಷಕ ಶಿವರಾಜ ಕಟ್ಟಿಮನಿ ಮಾತನಾಡಿ, ಮಹಿಳೆಯರ, ಮಕ್ಕಳ ಮತ್ತು ಬಾಲ್ಯವಿವಾಹ ಸೇರಿ ವಿವಿಧ ಕಾನೂನುಗಳು, ಸರ್ಕಾರದ ಯೋಜನೆಗಳ ಮಾಹಿತಿ ಮತ್ತು ಉಚಿತ ಕಾನೂನು ನೆರವು ಪಡೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಪಿಡಿಒ ವಿಜಯಲ್ಮ, ಭೀಮಣ್ಣ ವಡವಟ್, ಅರ್ಜುನ ರಾಠೋಡ, ವೆಂಕಟರಾಮಲು ಕೂಡಲೂರು, ಇಸ್ಮಾಯಿಲ್, ಬೇಬಿ ರಾಠೋಡ್, ಬಾಬು ಕಲಾಲ್ ಇತರರಿದ್ದರು.