ನೆಲಮಂಗಲದ ಶ್ರೀ ವೀರಭದ್ರೇಶ್ವರ ಪ್ರಾಥನಾ ಮಂದಿರದಲ್ಲಿ ಶಾಸಕ ಎನ್​.ಶ್ರೀನಿವಾಸ್​ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್​, ನಿಟಕಪೂರ್ವ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು, ಮಾಜಿ ಅಧ್ಯಕ್ಷೆ ಲತಾಹೇಮಂತ್​ಕುಮಾರ್​, ಸದಸ್ಯ ಸಿ.ಪ್ರದಿಪ್​, ನರಸಿಂಹಮೂರ್ತಿ ಇದ್ದರು.  
ರಾಜ್ಯ

ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ / NELAMANGAL

ನೆಲಮಂಗಲ : ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗ ಮಾಡಿಕೊಂಡು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎನ್​. ಶ್ರೀನಿವಾಸ್​ ತಿಳಿಸಿದರು.
ನಗರದ ಕವಾಡಿಮಠ ಶ್ರೀ ವೀರಭದ್ರೇಶ್ವರ ಪ್ರಾಥನಾ ಮಂದಿರದಲ್ಲಿ ನಗರಸಭೆಯಿಂದ 2024-&25ನೇ ಸಾಲಿನ ಶೇ.24.10, 7.25 ಮತ್ತು ಶೇ.5 ಯೋಜನೆಯಡಿ ಆಯೋಜಿಸಿದ್ದ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತರು ಸೇರಿ ಇತರ ಹಿಂದುಳಿದ ಸಮುದಾಯಗಳನ್ನು ಪ್ರಮುಖವಾಗಿರಿಸಿಕೊಂಡು ಸಮಾಜದ ಮುಖ್ಯವಾಹಿನಿತರಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ನಗರಸಭೆಯಲ್ಲೂ ಅನುದಾನ ಮೀಸಲಿರಿಸಿದ್ದು, ವಿವಿಧ ಸೌಲಭ್ಯ ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಮಾತನಾಡಿ, ನಗರಸಭೆಯಿಂದ ನೀಡಿದ್ದ ವಸ್ತುಗಳನ್ನು ಸರಿಯಾದ ರೀತಿ ಸದುಪಯೋಗ ಪಡಿಸಿಕೊಳ್ಳಬೇಕೆ ಹೊರತು ಬೆಲೆ ಬಾಳುವ ಉಪಕರಣಗಳನ್ನು ಕಾಸಿಗಾಗಿ ಮತ್ತೊಬ್ಬರಿಗೆ ಮಾರಾಟ ಮಾಡಿಕೊಳ್ಳಬಾರದು. ಇದರಿಂದ ಸರ್ಕಾರದ ಉದ್ದೇಶ ಈಡೇರುವುದಿಲ್ಲ ಎಂದರು.
ನಗರಸಭೆ ಸದಸ್ಯರಾದ ಪುರುಷೋತ್ತಮ್​, ಲೋಲಾಕ್ಷಿಗಂಗಾಧರ್​ , ಭಾರತೀಬಾಯಿ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ಮುಖಂಡ ಮುನಿಯಪ್ಪ, ನರಸಿಂಹಮೂರ್ತಿ, ನಾರಾಯಣ್​ರಾವ್​, ರವಿಕುಮಾರ್​, ನಗರಸಭೆ ವ್ಯವಸ್ಥಾಪಕ ಮಮ್ತಾಜ್​ ಪಾಷಾ, ಉಮೇಶ್​, ಲೆಕ್ಕ ಪರಿಶೋಧಕ ನಾಗೇಶ್​, ಸಮುದಾಯ ಸಂಘಟಕ ನಾರಾಯಣಸ್ವಾಮಿ ಇದ್ದರು.
ಅಧಿಕಾರಿಗಳಿಗೆ ಕಿವಿ ಮಾತು : ನಗರಸಭೆಯ ವಿಶೇಷ ಯೋಜನೆಯಡಿ ನಗರದ ವಿದ್ಯಾರ್ಥಿ ನಿಲಯಕ್ಕೆ ಹಾಸಿಗೆ, ದಿಂಬು ಸೇರಿ ಅಗತ್ಯ ವಸ್ತುಗಳನ್ನು ನೀಡಲು 93 ಲಕ್ಷ ರೂಪಾಯಿ ಅನುದಾನ ವೆಚ್ಚ ಮಾಡಲಾಗಿದೆ. ವಿದ್ಯಾರ್ಥಿನಿಲಯಕ್ಕೆ ಸಂಬಂಧಪಟ್ಟ ಮೂಲ ಸೌಕರ್ಯಗಳನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡಲಾಗುತ್ತಿದೆ. ಪರಿಶಿಷ್ಟರಿಗೆ ಮೀಸಲಿರಿಸಿದ್ದ ಹಣವನ್ನು ಅವರ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಶಾಸಕ ಎನ್​.ಶ್ರೀನಿವಾಸ್​ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸವಲತ್ತು ವಿತರಣೆ : ನಗರಸಭೆಯ 2024-&25ನೇ ಸಾಲಿನ ಶೇ.24.10, 7.25 ಮತ್ತು ಶೇ.5 ಯೋಜನೆಯಡಿ 24 ವಿದ್ಯಾರ್ಥಿಗಳಿ ಲ್ಯಾಪ್​ಟ್ಯಾಪ್​ ವಿತರಣೆ, 190 ಯುಪಿಎಸ್​, 37 ನೀರಿನ ಟ್ಯಾಂಕ್​, ಸರ್ಕಾರಿ ಶಾಲೆಗೆ ಅವಶ್ಯವಿರುವ ಪಾತ್ರೆ, ಅಗತ್ಯ ವಸ್ತುಗಳು, ವಿದ್ಯಾರ್ಥಿನಿಗಳಿಗೆ ಅಗತ್ಯ ವಸ್ತುಗಳು, ನೋಟ್​ ಬುಕ್​ ವಿತರಣೆ ಸೇರಿ ಸುಮಾರು 2.16ಕೋಟಿ ರೂಪಾಯಿ ವೆಚ್ಚದಲ್ಲಿ ಸೌಲಭ್ಯ ವಿತರಿಸಲಾಗಿದೆ ಎಂದು ಪೌರಾಯುಕ್ತ ಗಂಗಾಧರ್​ ಮಾಹಿತಿ ನೀಡಿದರು.