ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ cows 
ರಾಜ್ಯ

ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ cows

ಕೋಲಾರ ಡೆಸ್ಕ್
ಕ್ಯಾಲನೂರು: ರೈತರು ಆರ್ಥಿಕವಾಗಿ ಸದೃಢರಾಗಲು ಪಶುಸಂಗೋಪನೆ ಅತಿ ಮುಖ್ಯ. ಜಾನುವಾರುಗಳು ಮೃತಪಟ್ಟಾಗ ರೈತರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಹಾಲು ಒಕ್ಕೂಟವು ವಿಮಾ ಸೌಲಭ್ಯ ನೀಡುತ್ತಿದೆ ಎಂದು ಕೋಲಾರ ಹಾಲು ಒಕ್ಕೂಟದ (ಕೋಮುಲ್​) ನಿರ್ದೇಶಕ ಚಂಜಿಮಲೆ ಬಿ. ರಮೇಶ್​ ಹೇಳಿದರು.cows
ಕೆಲ ತಿಂಗಳ ಹಿಂದೆ ಸುಗಟೂರು ಹೋಬಳಿಯ ಮಟ್ನಹಳ್ಳಿಯ ಹಾಲು ಉತ್ಪಾದಕ ನಾರಾಯಣಸ್ವಾಮಿ ಅವರ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಮಂಜೂರಾದ 1 ಲಕ್ಷ ರೂ. ಮೊತ್ತದ ವಿಮಾ ಪರಿಹಾರದ ಚೆಕ್​ಅನ್ನು ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ರೈತರು ತಮ್ಮ ಜೀವನೋಪಾಯಕ್ಕಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೈನುಗಾರಿಕೆಯನ್ನೇ ನಂಬಿದ್ದಾರೆ. ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ರೈತರು ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಇದರಿಂದ ಹಸು ಮೃತಪಟ್ಟರೆ, ಮತ್ತೊಂದು ಹಸು ಖರೀದಿಸಲು ಆರ್ಥಿಕ ನೆರವು ಸಿಗಲಿದೆ ಎಂದು ತಿಳಿಸಿದರು.
ಕಾರ್ಯದರ್ಶಿಗಳು ರೈತರಿಗೆ ಕಾಲಕಾಲಕ್ಕೆ ವಿಮೆ ಮಾಡಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಹಸುಗಳ ವಿಮೆಯ ಜತೆಗೆ ರೈತರ ಆರೋಗ್ಯ ಹಿತದೃಷ್ಟಿಯಿಂದ "ಕೋಮುಲ್​ ವಿಮಾ ಯೋಜನೆ' ಹಾಗೂ "ಯಶಸ್ವಿನಿ' ಯೋಜನೆಗಳಡಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದರು.