ಕೆಂಭಾವಿ ಬಳಿಯ ಗೌಡಗೇರಿ ಗ್ರಾಮದ ಪಿಎಎಂಶ್ರಿ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಉದ್ಘಾಟಿಸಿದರು. ದೇವೇಂದ್ರಪ್ಪಗೌಡ ಗೌಡಗೇರಾ, ಮುಖ್ಯಗುರು ಡಿ.ಡಿ.ರಾಂಪುರ, ಅನೀಲಕುಮಾರ, ಶ್ರೀಧರ, ಶರಣಗೌಡ ಇತರರಿದ್ದರು 
ರಾಜ್ಯ

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯಕ್ಷರು ವಿಭೂತಿಹಳ್ಳಿ ಸಲಹೆ
  • ಗೌಡಗೇರಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕೆಂಭಾವಿ: ಗ್ರಾಮೀಣ ಪ್ರದೇಶದಲ್ಲಿ ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಹೇಳಿದರು.
ಗೌಡಗೇರಿ ಗ್ರಾಮದ ಪಿಎಂಶ್ರಿ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕೆಕೆಬಿ ಇಂಜೀನಿಯರಿಂಗ್​ ಕನ್​ಸ್​್ಟ್ರಕ್ಷನ್​ ಪ್ರೆವೇಟ್​ ಲಿಮಿಟೆಡ್​ನಿಂದ 2025&26ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು.
ಇತ್ತೀಚಿನ ಕೆಲ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಕಲಿಕೆಯಿಂದ ಹಿಂದೆ ಉಳಿಯುತ್ತಿರುವುದದಕ್ಕೆ ಪಾಲಕರ ನಿಷ್ಕಾಳಜಿಯೇ ಪ್ರಮುಖ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹಲವು ಉತ್ತಮ ಯೋಜನೆಗಳನ್ನು ರೂಪಿಸಿದ್ದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದು ಅನುಕೂಲವಾಗಿದೆ. ಪ್ರತಿವರ್ಷ ಕೆಕೆಬಿ ವತಿಯಿಂದ ದೇವೇಂದ್ರಪ್ಪಗೌಡ ಅವರು ಕೊಡುವ ಈ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಕೆಕೆಬಿ ಇಂಜೀನಿಯರಿಂಗ್​ ಕನ್​ಸ್​್ಟ್ರಕ್ಷನ್​ ಪ್ರೆವೇಟ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರಪ್ಪಗೌಡ ಮಾಲಿ ಬಿರಾದಾರ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಕಲಿಕೆಯ ಕಡೆ ಹೆಚ್ಚು ಗಮನ ಕೊಡಬೇಕು. ಅಬ್ದುಲ್​ ಕಲಾಂ, ಭಗತ್​ಸಿಂಗ್​ನಂಥ ಮಹಾನ್​ ನಾಯಕರಾಗಿ ದೇಶಕ್ಕೆ, ಗ್ರಾಮಕ್ಕೆ, ತಂದೆ&ತಾಯಿಗಳಿಗೆ ಹೆಸರು ತರುವ ಕೆಲಸ ಮಕ್ಕಳು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕ ನಿಂಗಣ್ಣ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ನಂತರ ಎಸ್​.ಎಸ್​.ಎಲ್​.ಸಿ ಯಲ್ಲಿ ಉತ್ತೀರ್ಣರಾದ ಎಲ್ಲ 27 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮತ್ತು ಅವರ ಪಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಗುರು ಡಿ.ಡಿ.ರಾಂಪುರ ಅಧ್ಯಕ್ಷತೆ ವಹಿಸಿದ್ದರು. ಸುರಪುರ ವಲಯ ಅರಣ್ಯ ಅಧಿಕಾರಿ ಅನೀಲಕುಮಾರ, ಡಿಆರ್​ಎಫ್​ಒ ಶ್ರೀಧರ, ಪ್ರಾಥಮಿಕ ಶಾಲೆ ಮುಖ್ಯಗುರು ಬಾಬುಪಟೇಲ್​, ಶರಣಗೌಡ ಅಚ್ಚಪ್ಪಗೌಡ, ಭೀಮನಗೌಡ ಮಾಲಿಬಿರಾದಾರ, ಯಂಕಣ್ಣ ದೊರಿ, ಶಂಕ್ರಯ್ಯಸ್ವಾಮಿ, ಭೀಮನಗೌಡ ಎಮ್​. ಮಾಲಿಬಿರಾದಾರ, ಶಾಂತಗೌಡ ಮೇಟಿ, ಸುಜಾತಾ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಕುಲಕರ್ಣಿ ಸ್ವಾಗತಿಸಿದರು, ಶಿವಾನಂದ ವಂದಿಸಿದರು.