ಅರುಣ್ ಸೋಮಣ್ಣ  
ರಾಜ್ಯ

ಪ್ರತಿ ವಾರ್ಡ್‌ನಲ್ಲಿ ಬಿಜೆಪಿ ಗೆಲ್ಲಿಸಿ: ಅರುಣ್ ಸೋಮಣ್ಣ ಕರೆ

ಬೆಂಗಳೂರು: ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರದ ಪ್ರತಿ ವಾರ್ಡ್‌ನಲ್ಲಿ ಬಿಜೆಪಿ ಗೆಲ್ಲಬೇಕು.  ಮುಂಬರುವ ಪಾಲಿಕೆ ಚುನಾವಣೆಗೆ ಮುಖಂಡರು ಮತ್ತು ಕಾರ್ಯಕರ್ತರು ಸಜ್ಜಾಗಬೇಕು ಎಂದು  ಬಿಜೆಪಿ ಯುವ ಮುಖಂಡ ಅರುಣ್ ಸೋಮಣ್ಣ ಕರೆ ನೀಡಿದ್ದಾರೆ. 
ವಿಜಯನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮುಖಂಡ ಎಚ್. ರವೀಂದ್ರ ಪುತ್ರ ನವೀನ್ ರವೀಂದ್ರ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಪ್ರಧಾನಿ ನರೇಂದ್ರ ಮೋದಿ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತವು. ಬೆಂಗಳೂರಿನ ಅಭಿವೃದ್ಧಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸೋಣ ಎಂದರು.
ವಿಜಯನಗರ,  ಗೋವಿಂದರಾಜನಗರದಲ್ಲಿ ನಮ್ಮ ಪಕ್ಷವನ್ನು  ಅಧಿಕಾರಕ್ಕೆ ತರಲು ಸತತವಾಗಿ ರವೀಂದ್ರ ಹೋರಾಟ ಮಾಡುತ್ತಿದ್ದಾರೆ. ಶಾಸಕರು, ಸಂಸದರು, ಪಾಲಿಕೆ ಸದಸ್ಯರ ಗೆಲುವಿಗಾಗಿ  ಅಪಾರ ಶ್ರಮವಹಿಸಿದ್ದಾರೆ. ಅದೇ ಹಾದಿಯಲ್ಲಿ ನವೀನ್ ರವೀಂದ್ರ ಪಕ್ಷಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ನವೀನ್ ರವೀಂದ್ರಗೆ ಕೇಕ್ ತಿನ್ನಿಸಿ ಶುಭ ಹಾರೈಸಿದರು. ಬಿಜೆಪಿ ಹಿರಿಯ ಮುಖಂಡ ಎಚ್. ರವೀಂದ್ರ, ಎ.ಸೋಮಶೇಖರ್, ಸಂತೋಷ್, ಬಾಂಡ್ ರವಿರಾಜ್, ರಾಜಶೇಖರ್, ನರಸಿಂಹ ಸೇರಿ ಸಾವಿರಾರು ಕಾರ್ಯಕರ್ತರಿದ್ದರು.