ಮುಳಬಾಗಿಲಿನ Wrestling tournamentಶ್ರೀ ಪಂಚಮುಖಿ ಹನುಮಾನ್​ ವ್ಯಾಯಾಮ ಶಾಲೆಯಿಂದ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಗೆ ಮಾಲೂರು ಜೆಡಿಎಸ್​ ಮುಖಂಡ ಹೂಡಿ ವಿಜಯಕುಮಾರ್​, ರಾಜ್ಯ ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯ ಜಿ.ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.  
ರಾಜ್ಯ

ಪ್ರತಿ ಮನೆಯಲ್ಲೂ ಕುಸ್ತಿಪಟು ತಯಾರಿಸಿ Wrestling tournament

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ಮುಖಂಡ ಹೂಡಿ ವಿಜಯಕುಮಾರ್​ ಕರೆ
ಮುಳಬಾಗಿಲು : ಭಾರತೀಯ ಸಂಸತಿ, ಪರಂಪರೆ ವೈಾನಿಕವಾಗಿ Wrestling tournament ಕೂಡಿದ್ದು, ಇವು ಸಮಾಜಕ್ಕೆ ಪೂರಕವಾಗಿವೆ. ಈ
ಸಂಪ್ರದಾಯಗಳು ಉಳಿಯಬೇಕಾದರೆ ಕುಸ್ತಿ ಪಂದ್ಯಾವಳಿಗಳಿಗೆ ಪೋತ್ಸಾಹ ನೀಡಬೇಕು ಎಂದು ಮಾಲೂರು ಜೆಡಿಎಸ್​ ಮುಖಂಡ ಹೂಡಿ ವಿಜಯಕುಮಾರ್​ ತಿಳಿಸಿದರು.
ನಗರದ ಪುರಾಣಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಪಂಚಮುಖಿ ಹನುಮಾನ್​ ವ್ಯಾಯಾಮ ಶಾಲೆಯಿಂದ ಗುರುವಾರ ಏರ್ಪಡಿಸಿದ್ದ ರಾಜ್ಯಮಟ್ಟದ 2ನೇ ದಿನದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಇಡೀ ಭೂಮಂಡಲದಲ್ಲಿ ರಾಜರ ಕಾಲದಿಂದಲೂ ದೇಶ&ದೇಶಗಳ ಮಧ್ಯೆ ನಡೆಯುತ್ತಿದ್ದ ಯುದ್ಧಗಳನ್ನು ತಡೆಗಟ್ಟಲು ಪ್ರಬಲಶಾಲಿ ಕುಸ್ತಿ ಪಟ್ಟು ಗಳಿಂದ ಕುಸ್ತಿ ಪಂದ್ಯಾವಳಿ ನಡೆಸಿ ಯುದ್ಧ ತಡೆಗಟ್ಟಿ ರಾಜ್ಯಗಳನ್ನು ವಶಪಡಿಸಿಕೊಂಡು ಬರುತ್ತಿದ್ದರು. ಪುರಾತನ ಕುಸ್ತಿ ಪಂದ್ಯಾವಳಿಗಳು ಉಳಿಯಬೇಕಾದರೆ ಇಡೀ ಸಮಾಜ ಪೋತ್ಸಾಹ ನೀಡಬೇಕು. ಎಲ್ಲಿಯವರೆಗೂ ಸಮಾಜದ ಸಂಪ್ರದಾಯಗಳಿಗೆ ನಾವು ಪೋತ್ಸಾಹ ನೀಡಿಕೊಂಡು ಬಂದರೆ ಅಲ್ಲಿಯವರೆಗೂ ದೇಶ ಸಂಪ್ರದಾಯಗಳು ಸುಭದ್ರವಾಗಿ ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ದಿ.ಜಿ ರಾಮಯ್ಯ ಗುರುಗಳ ಗರಡಿಯಲ್ಲಿ ಬೆಳೆದ ಈಗಿನ ಗುರುಗಳಾದ ಪೈಲ್ವಾನ್​ ಕೃಷ್ಣಪ್ಪ ಅವರ ಸಹಕಾರದೊಂದಿಗೆ ಶ್ರೀಪಂಚಮುಖಿ ಹನುಮಾನ್​ ವ್ಯಾಯಾಮ ಶಾಲೆಯ ಅಧ್ಯ ಗರಡಿ ಆರ್​.ಶಂಕರ್​ ಅಧ್ಯತೆಯಲ್ಲಿ ಸಂಪ್ರದಾಯದಂತೆ 94 ವರ್ಷದಿಂದ ಮುಂದುವರಿಸಿಕೊಂಡು ಬರುತ್ತಿರುವ ಕುಸ್ತಿ ಪಂದ್ಯಾವಳಿಗಳನ್ನು ಈಗಲೂ ನಡೆಸುತ್ತಿರುವುದಕ್ಕೆ ಸಂಪೂರ್ಣ ಸಹಕಾರ ಇರುತ್ತದೆ ,ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ನೀಡುವುದರಲ್ಲಿ ನಮಗೆ ಸಿಗುವ ಪ್ರಶಸ್ತಿ ಜೊತೆಗೆ ಆರೋಗ್ಯ ಸಹ ವೃದ್ಧಿಯಾಗುತ್ತದೆ ಮುಂದಿನ ದಿನಗಳಲ್ಲಿ ಕುಸ್ತಿ ಪಂದ್ಯಾವಳಿಗಳು ವೀಸುವ ಪ್ರತಿಯೊಬ್ಬರ ಕುಟುಂಬದಲ್ಲೂ ಒಬ್ಬ ಕುಸ್ತಿಪಟು ಬೆಳೆಸಲು ಮುಂದಾಗಬೇಕೆಂದು ಕರೆ ನೀಡಿದರು.
ಜೈವಿಕ ಇಂಧನ ಮಂಡಳಿ ರಾಜ್ಯ ಮಾಜಿ ಉಪಾಧ್ಯ, ಕೆಪಿಸಿಸಿ ಸದಸ್ಯ ಜಿ ರಾಮಲಿಂಗಾರೆಡ್ಡಿ ಮಾತನಾಡಿ, ಶ್ರೀ ಪಂಚಮುಖಿ ಹನುಮಾನ್​ ವ್ಯಾಯಾಮ ಶಾಲೆ ಗರಡಿ ಮನೆಯಲ್ಲಿ ನಮ್ಮ ಯುವಕರನ್ನು ಕುಸ್ತಿಪಟು ವಿದ್ಯಾಭ್ಯಾಸ ಪಡೆಯಲು ಬಿಟ್ಟರೆ ಆ ಮನೆಯಲ್ಲಿ ಒಬ್ಬ ದೇಶ ಕಾಯುವ ಸೈನಿಕರನ್ನು ತಯಾರು ಮಾಡಬಹುದು. ಆದುದರಿಂದ
ಪ್ರತಿ ಕುಟುಂಬದಲ್ಲೂ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಕುಸ್ತಿ ಕಲೆಗಳನ್ನು ಕಲಿಯಲು ಸಹಕಾರ ನೀಡಬೇಕೆಂದು ತಿಳಿಸಿದರು.
ಕೋಲಾರ ಜಿಲ್ಲಾ ವಹ್ನಿಕುಲ ತ್ರಿಯ ತಿಗಳರ ಸಂದ ಅಧ್ಯ ಉದಯಕುಮಾರ್​, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯ ಆರ್​.ಆರ್​.ರಾಜೇಂದ್ರಗೌಡ, ಮಲ್ಲಿಕಾರ್ಜುನ ರೆಡ್ಡಿ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಸುವಾಸ್​ಶೆಟ್ಟಿ, ಸದಸ್ಯರಾದ ಆರ್​.ವಿ. ಆಂಜನೇಯರೆಡ್ಡಿ, ಮುಹ್ಮದ್​ ಹಿದಾಯಿತ್​ಅಲಿ, ದರಖಾಸ್ತು ಸಮಿತಿ ಸದಸ್ಯ ಜಮ್ಮನಹಳ್ಳಿ ಕೃಷ್ಣಪ್ಪ, ಕಾಂಗ್ರೆಸ್​ ಹಿರಿಯ ಮುಖಂಡ ಎಂ.ಗೋಪಾಲ್​, ಸಮಾಜ ಸೇವಕರಾದ ವಿ.ಪಿ.ಭಾಸ್ಕರನ್​, ಸಂಗೊಳ್ಳಿ ವೆಂಕಟೇಶ್​, ಕೋಲಾರ ನಗರಸಭಾ ಸದಸ್ಯ ಗುಣಶೇಖರ್​, ಹಿರಿಯ ವಕೀಲ ಎಂ.ಶಂಕರ್​, ನೂರ್​ಜಾನ್​,
ಪೈಲ್ವಾನ್​ ಎನ್​. ಅರ್ಜುನ್​, ಪೈಲ್ವಾನ್​ ವಿ.ಕೃಷ್ಣಪ್ಪ, ಪೈಲ್ವಾನ್​ ಸುಬ್ರಮಣಿ, ನಗರಸಭೆ ಮಾಜಿ ಸದಸ್ಯ ಟಿ. ಮುನಿರಾಜು, ಶ್ರೀ ಪಂಚಮುಖಿ ಹನುಮಾನ್​ ವ್ಯಾಯಾಮ ಶಾಲೆಯ ಶಿಷ್ಯ ವೃಂದ ಇದ್ದರು.