ಗುರುಮಠಕಲ್​ನಲ್ಲಿ ಭಾನುವಾರ ನಡೆದ ಮುಸ್ಲಿಂ ಪಂಚ್​ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೈನೋದ್ದೀನ್​ ಸೇರಿ ಇತರೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಖತೀಬ್​ ಡಾ.ಮುಜಾಫರ್​ ಖಾನ್​, ಮುಬಾರಕ ಬೀನ್​ ಜಮೀಲ್​, ಪಾಶ ಪ್ಯಾರೇ, ಅಕ್ತರ್​ ಪ್ಯಾರೆ, ಮುಜುದ್ದಿನ್​ ಖಾನ್​, ಅಕ್ಬರ್​, ಸೈಯಾದ್​ ಬಾಬಾ, ಬಾಬಾ ಚಿಂತಕುಂಟ ಇತರರಿದ್ದರು. 
ರಾಜ್ಯ

ಮುಸ್ಲಿಂ ಪಂಚ್​ ಅಧ್ಯಕ್ಷರಾಗಿ ಮೈನೋದ್ದೀನ್​

ಗುರುಮಠಕಲ್​: ಮುಸ್ಲಿಂ ಪಂಚ್​ ಅಧ್ಯಕ್ಷರಾಗಿ ಸೈಯಾದ್​ ಖಾಜಾ ಮೈನೋದ್ದೀನ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಗುರುಮಠಕಲ್​ ನಗರ ಮುಸ್ಲಿಂ ಪಂಚ್​ ಅಧ್ಯಕ್ಷ&ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಚುನಾವಣೆ ಗುರುಮಠಕಲ್​ನ ಖತೀಬ್​ ಡಾ.ಮುಜಾಫರ್​ ಖಾನ್​ ಅವರ ನೇತೃತ್ವದಲ್ಲಿ ನಡೆದಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೈಯಾದ್​ ಖಾಜಾ ಮೈನೋದ್ದೀನ್​ (ಅಧ್ಯಕ್ಷ), ಫಯಾಜ್​ ಅಹಮದ್​(ಉಪಾಧ್ಯಕ್ಷ), ಅಬ್ದುಲ್​ ನಬಿ ಹವಾಲ್ದಾರ್​ (ಕಾರ್ಯದರ್ಶಿ) ಚಂದಪಾಷಾ (ಖಜಾಂಚಿ)ಯಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮುಬಾರಕ ಬೀನ್​ ಜಮೀಲ್​, ಪಾಶ ಪ್ಯಾರೇ, ಅಕ್ತರ್​ ಪ್ಯಾರೆ, ಮುಜುದ್ದಿನ್​ ಖಾನ್​, ಅಕ್ಬರ್​, ಸೈಯಾದ್​ ಬಾಬಾ, ಬಾಬಾ ಚಿಂತಕುಂಟ, ವಹಿದ್​ ಚಿಂತಕುಂಟಿ, ನಹಿಮ್​, ಸೀರಾಜ್​, ಪೀರ್​ ಅಹಮದ್​ ಜಾಕ್​, ಹಬೀದ್​ ಬಾಬು, ಸಜೀದ್​ ಇತರರಿದ್ದರು.