ತುರುವೇಕೆರೆ Health ಪಟ್ಟಣದ ರೋಟರಿ ಕ್ಲಬ್ ವತಿಯಿಂದ ಬಿಗನೇನಹಳ್ಳಿ ಸರ್ಕಾರಿ ಶಾಲೆಗೆ ಪೋಡಿಯಂ ವಿತರಿಸಲಾಯಿತು.
ತುರುವೇಕೆರೆ: ಪಟ್ಟಣದ ರೋಟರಿ ಕ್ಲಬ್ ವತಿಯಿಂದ ವಿಶ್ವ ಆಹಾರ, Health ವಿಶ್ವ ಅಂಚೆ ಹಾಗೂ ವಿಶ್ವ ಉಳಿತಾಯ ದಿನವನ್ನು ಪಟ್ಟಣದ ರೋಟರಿ ಭವನದಲ್ಲಿ ಆಯೋಜಿಸಲಾಗಿತ್ತು.
ಮಕ್ಕಳ ತಜ್ಞ ಡಾ.ನಂಜಪ್ಪ ಅವರು ಸಿರಿಧಾನ್ಯಗಳಿಂದಾಗುವ ಉಪಯೋಗ ಹಾಗೂ ಅದರಿಂದಾಗುವ ಆರೋಗ್ಯ ಬೆಳವಣೆಗೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿಕೊಟ್ಟರು.
ಅಂಚೆ ಇಲಾಖೆಯ ಶಿವಮೂರ್ತಿ ಸಾರ್ವಜನಿಕರಿಗೆ ಅಂಚೆಯಲ್ಲಿ ಸಿಗುವಂತ ಸವಲತ್ತುಗಳ ಕುರಿತು ವಿವರಿಸಿದರು. ಡಾ.ನಂಜಪ್ಪ, ಶಿವಮೂರ್ತಿ ಹಾಗೂ ಅಂಚೆ ಪತ್ರ ಹಂಚಿಕೆದಾರ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ಬಿಗನೇನಹಳ್ಳಿ ಸರ್ಕಾರಿ ಶಾಲೆಗೆ ಪೋಡಿಯಂ ವಿತರಿಸಲಾಯಿತು. ಸಾಹಿತಿ ತುರುವೇಕೆರೆ ಪ್ರಸಾದ್ ಬುಲೆಟಿನ್ ಬಿಡುಗಡೆ ಮಾಡಿದರು. ರೋಟರಿ ಅಧ್ಯಕ್ಷ ವಿ.ಆರ್.ಉಮೇಶ್, ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತಾ, ಕಾರ್ಯದರ್ಶಿ ಸಿ.ಆರ್.ಸುನಿಲ್, ಸದಸ್ಯರಾದ ಲೋಕಣ್ಣ, ಬಸವರಾಜು, ಶೋಭಾ ಉಮೇಶ್, ಆನಂದಜಲ, ಸತ್ಯನಾರಾಯಣ್, ರೇವಣ್ಣ, ಉಪೇಂದ್ರ, ಉಮೇಶ್, ತ್ರಿಜಿ, ಗಿರೀಶ್ ಸೇರಿ ಶಿಕ್ಷಕರು ಹಾಗೂ ರೋಟರಿ ಸದಸ್ಯರು ಇದ್ದರು.